10,000 ಅಂತರ್ ರಾಷ್ಟ್ರೀಯ ರನ್ ಗಳಿಸಿದ ಭಾರತದ ಮೊದಲ ಆಟಗಾರ್ತಿ ಮಿಥಾಲಿ ರಾಜ್
ಜೋಹಾನ್ಸ್ಬರ್ಗ್: ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ 10,000 ರನ್ ಪೂರೈಸಿದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಭಾರತದ ಏಕದಿನ ತಂಡದ ನಾಯಕಿಯಾಗಿರುವ 38ರ ಹರೆಯದ ಮಿಥಾಲಿ ಇಂಗ್ಲೆಂಡ್ ನ ಚಾರ್ಲೊಟ್ ಎಡ್ವಡ್ರ್ಸ್ ಇರುವ ಎಲೈಟ್ ಕ್ಲಬ್ ಗೆ ಸೇರ್ಪಡೆಯಾದರು.
ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ ಭಾರತದ ಮೊದಲ ಇನಿಂಗ್ಸ್ ನ 28ನೇ ಓವರ್ ನಲ್ಲಿ ಬೌಂಡರಿ ಬಾರಿಸುವುದರೊಂದಿಗೆ ಮಿಥಾಲಿ ಈ ಸಾಧನೆ ಮಾಡಿದರು.
10 ಸಾವಿರ ಅಂತರ್ ರಾಷ್ಟ್ರೀಯ ರನ್ ಗಳಿಸಿದ ಮೊದಲ ಭಾರತೀಯ ಮಹಿಳೆಯಾಗಿರುವ ಮಿಥಾಲಿಗೆ ಬಿಸಿಸಿಐ ಟ್ವೀಟರ್ ಮೂಲಕ ಅಭಿನಂದಿಸಿದೆ.
ಮಿಥಾಲಿ 10,000 ರನ್ ಮೈಲುಗಲ್ಲು ತಲುಪಿದ ಬೆನ್ನಿಗೇ ವಿಕೆಟ್ ಒಪ್ಪಿಸಿದರು. ಮಿಥಾಲಿ 50 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 36 ರನ್ ಗಳಿಸಿದರು.
ಮಿಥಾಲಿ 10 ಟೆಸ್ಟ್ ಪಂದ್ಯಗಳಲ್ಲಿ 663 ರನ್ ಗಳಿಸಿದ್ದು, 214 ರನ್ ಗರಿಷ್ಟ ವೈಯಕ್ತಿಕ ಸ್ಕೋರ್ ಆಗಿದೆ. 212 ಏಕದಿ£ ಹಾಗೂ 89 ಟಿ-20 ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲಿ ಕ್ರಮವಾಗಿ 6,938 ಹಾಗೂ 2,364 ರನ್ ಗಳಿಸಿದ್ದಾರೆ.