ಐಸಿಸಿ ಟಿ-20 ರ್ಯಾಂಕಿಂಗ್: ಐದನೇ ಸ್ಥಾನಕ್ಕೇರಿದ ಕೊಹ್ಲಿ
ದುಬೈ : ಐಸಿಸಿ ಟಿ-20 ರ್ಯಾಂಕಿಂಗ್ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಅಗ್ರ-5ರೊಳಗೆ ವಾಪಸಾಗಿದ್ದಾರೆ. ಅಹಮದಾಬಾದ್ನಲ್ಲಿ ಈಗ ನಡೆಯುತ್ತಿರುವ ಟಿ-20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಇಂಗ್ಲೆಂಡ್ನ ಸ್ಟಾರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಅಗ್ರ-20ರೊಳಗೆ ಮತ್ತೆ ಪ್ರವೇಶ ಪಡೆದಿದ್ದಾರೆ.
ಪ್ರಸ್ತುತ ಏಕದಿನ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನದಲ್ಲಿರುವ ಕೊಹ್ಲಿ ಎರಡನೇ ಹಾಗೂ ಮೂರನೇ ಟಿ-20 ಪಂದ್ಯದಲ್ಲಿ 73 ಹಾಗೂ 77 ರನ್ ಗಳಿಸಿ 47 ರೇಟಿಂಗ್ ಪಾಯಿಂಟ್ಸ್ ಪಡೆದು ಟಿ-20 ರ್ಯಾಂಕಿಂಗ್ನಲ್ಲಿ ಒಂದು ಸ್ಥಾನ ಭಡ್ತಿ ಪಡೆದಿದ್ದಾರೆ.
ಕೊಹ್ಲಿ ಸದ್ಯ 5ನೇ ರ್ಯಾಂಕಿಂನಲ್ಲಿದ್ದು, ಎಲ್ಲ ಮೂರು ಮಾದರಿಯ ಕ್ರಿಕೆಟ್ನಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆದಿರುವ ಏಕೈಕ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೂರನೇ ಏಕದಿನ ಪಂದ್ಯದಲ್ಲಿ ಔಟಾಗದೆ 83 ರನ್ ಗಳಿಸಿದ್ದ ಬಟ್ಲರ್ 5 ಸ್ಥಾನ ಭಡ್ತಿ ಪಡೆದು 19ನೇ ಸ್ಥಾನಕ್ಕೇರಿದ್ದಾರೆ. 2018ರಲ್ಲಿ ಜೀವನಶ್ರೇಷ್ಠ 17ನೇ ಸ್ಥಾನ ಪಡೆದಿದ್ದರು.
ಶ್ರೇಯಸ್ ಅಯ್ಯರ್(31ನೇ ಸ್ಥಾನ)ಹಾಗೂ ರಿಷಭ್ ಪಂತ್(80ನೇ ಸ್ಥಾನ)ಭಡ್ತಿ ಪಡೆದಿರುವ ಆಟಗಾರರಾಗಿದ್ದು, ಆಲ್ರೌಂಡರ್ ವಾಶಿಂಗ್ಟನ್ ಸುಂದರ್(11ನೇ ಸ್ಥಾನ), ವೇಗದ ಬೌಲರ್ಗಳಾದ ಶಾರ್ದೂಲ್ ಠಾಕೂರ್(27ನೇ ಸ್ಥಾನ) ಹಾಗೂ ಭುವನೇಶ್ವರ ಕುಮಾರ್(45ನೇ ಸ್ಥಾನ)ರ್ಯಾಂಕಿಂಗ್ನಲ್ಲಿ ಪ್ರಗತಿ ಸಾಧಿಸಿದ್ದಾರೆ.