ಐಎಸ್ ಎಸ್ ಎಫ್ ವಿಶ್ವಕಪ್ ನಲ್ಲಿ ಭಾಗವಹಿಸಿರುವ ಮೂವರು ಶೂಟರ್ ಗಳಿಗೆ ಕೊರೋನ ಪಾಸಿಟಿವ್
ಹೊಸದಿಲ್ಲಿ: ರಾಷ್ಟ್ರರಾಜಧಾನಿಯಲ್ಲಿ ನಡೆಯುತ್ತಿರುವ ಐಎಸ್ ಎಸ್ ಎಫ್ ವಿಶ್ವಕಪ್ ನಲ್ಲಿ ಭಾಗವಹಿಸಿರುವ ಮೂವರು ಶೂಟರ್ ಗಳಿಗೆ ಕೊರೋನ ಪಾಸಿಟಿವ್ ಕಂಡುಬಂದಿದೆ ಎಂದು ನ್ಯಾಶನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ(ಎನ್ ಆರ್ ಎಐ)ಮೂಲಗಳು ಶನಿವಾರ ತಿಳಿಸಿವೆ.
ಶೂಟರ್ ಗಳು ಪ್ರಸ್ತುತ ತಾವಿರುವ ಟೀಮ್ ಹೊಟೇಲ್ ನಲ್ಲಿ ಸ್ವಯಂ ಪ್ರತ್ಯೇಕವಾಗಿದ್ದಾರೆ. ಮೂವರು ಶೂಟರ್ ಗಳೊಂದಿಗೆ ಕೊಠಡಿಗಳನ್ನು ಹಂಚಿಕೊಂಡವರನ್ನು ಕೋವಿಡ್-19 ಪರೀಕ್ಷೆಯ ಬಳಿಕ ಪ್ರತ್ಯೇಕವಾಗಿಡಲಾಗಿದೆ. ರೂಮ್ ಮೇಟ್ ಗಳ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ.
ಮೂವರು ಶೂಟರ್ ಗಳ ಪೈಕಿ ಇಬ್ಬರು ಭಾರತೀಯ ತಂಡದಲ್ಲಿದ್ದರು. ತಂಡಗಳು ಟೂರ್ನಮೆಂಟ್ ಗೆ ಆಗಮಿಸಿದ ಬಳಿಕ ಎಲ್ಲ ನಾಲ್ವರು ಶೂಟರ್ ಗಳಿಗೆ ಸೋಂಕು ತಗಲಿದೆ.
ಗುರುವಾರ ಅಂತರ್ ರಾಷ್ಟ್ರೀಯ ಮಟ್ಟದ ಪ್ರಮುಖ ಶೂಟರ್ ಗೆ ಕೋವಿಡ್ ಪಾಸಿಟಿವ್ ಆಗಿದ್ದು, ಅವರನ್ನು ಆಸ್ಪತ್ರೆಗೆ ಕಳುಹಿಸಲಾಗಿತ್ತು.
Next Story