ಮೂರನೇ ಏಕದಿನ ಪಂದ್ಯ: ಭಾರತ 329 ರನ್ ಗಳಿಸಿ ಆಲೌಟ್
ಧವನ್, ಪಂತ್, ಹಾರ್ದಿಕ್ ಪಾಂಡ್ಯ ಅರ್ಧಶತಕ
ಪುಣೆ: ಟೀಮ್ ಇಂಡಿಯಾವು ರವಿವಾರ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಸರಣಿ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಶಿಖರ್ ಧವನ್(67), ರಿಷಭ್ ಪಂತ್(78) ಹಾಗೂ ಹಾರ್ದಿಕ್ ಪಾಂಡ್ಯ(64) ಅರ್ಧಶತಕಗಳ ಕೊಡುಗೆ ನೆರವಿನಿಂದ 329 ರನ್ ಗೆ ಆಲೌಟಾಯಿತು.
ಧವನ್, ಪಂತ್ ಹಾಗೂ ಪಾಂಡ್ಯಯವರ ಅರ್ಧಶತಕಗಳ ಕೊಡುಗೆಯ ಹೊರತಾಗಿಯೂ ಭಾರತವು 48.2 ಓವರ್ ಗಳಲ್ಲಿ 329 ರನ್ ಗೆ ಆಲೌಟಾಗಿದೆ.
ರೋಹಿತ್ ಶರ್ಮಾ(37), ಶಾರ್ದೂಲ್ ಠಾಕೂರ್ (30) ಹಾಗೂ ಕೃನಾಲ್ ಪಾಂಡ್ಯ(25) ಎರಡಂಕೆಯ ಸ್ಕೋರ್ ಗಳಿಸಿದರು.
ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ 14.4 ಓವರ್ ಗಳಲ್ಲಿ 103 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು.
ಇಂಗ್ಲೆಂಡ್ ಬೌಲಿಂಗ್ ವಿಭಾಗದಲ್ಲಿ 7 ಮಂದಿ ಬೌಲರ್ ಗಳು ಬೌಲಿಂಗ್ ದಾಳಿ ನಡೆಸಿದ್ದು, ಮಾರ್ಕ್ ವುಡ್(3-34) ಹಾಗೂ ಆದಿಲ್ ರಶೀದ್(2-81) ಐದು ವಿಕೆಟ್ ಗಳನ್ನು ಹಂಚಿಕೊಂಡರು.
Next Story