ಆಟಗಾರರಿಗೆ ಕೊರೋನ ಪಾಸಿಟಿವ್: ಕೋಲ್ಕತಾ- ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಮುಂದೂಡಿಕೆ
ಮುಂಬೈ, ಮೇ 3: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗರಾರಿಬ್ಬರಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡ ಹಿನ್ನಲೆ ಇಂದು ( ಮೇ 3) ನಡೆಯಲಿರುವ ಪಂದ್ಯವನ್ನು ಮುಂದೂಡಲಾಗಿದೆ.
ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಸೋಮವಾರ (ಮೇ 3) ನಡೆಯಬೇಕಾಗಿತ್ತು. ಆದರೆ ಕೋಲ್ಕತಾ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಗೆ ಕೊರೋನ ಸೋಂಕು ದೃಢಪಟ್ಟ ಕಾರಣ ಪಂದ್ಯವನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಏಳು ಪಂದ್ಯಗಳಿಂದ 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಕೋಲ್ಕತಾ ನೈಟ್ ರೈಡರ್ಸ್ ಏಳನೇ ಸ್ಥಾನದಲ್ಲಿದೆ.
Official Announcement:
— Royal Challengers Bangalore (@RCBTweets) May 3, 2021
Today’s match between KKR and RCB has been postponed by the BCCI as per IPL Safety Guidelines after Varun Chakaravarthy and Sandeep Warrier tested positive for COVID.
We wish Varun and Sandeep a speedy recovery. #PlayBold #IPL2021 #KKRvRCB pic.twitter.com/yctoffeW3C