ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್:ಭಾರತದ ಬ್ಯಾಟಿಂಗ್ ಗೆ ಮಂದ ಬೆಳಕು ಅಡ್ಡಿ
ಸೌತಾಂಪ್ಟನ್: ಭಾರತ-ನ್ಯೂಝಿಲ್ಯಾಂಡ್ ನಡುವೆ ಇಲ್ಲಿ ಶನಿವಾರ ಆರಂಭವಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಮಂದಬೆಳಕು ಅಡ್ಡಿಯಾಗಿದೆ.
ಮಂದಬೆಳಕಿನಿಂದಾಗಿ ಪಂದ್ಯ ನಿಂತಾಗ ಭಾರತವು 64.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದೆ.
ಎರಡನೇ ದಿನದಾಟದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಆಹ್ವಾನಿಸಲ್ಪಟ್ಟ ನಾಯಕ ವಿರಾಟ್ ಕೊಹ್ಲಿ(ಔಟಾಗದೆ 44, 124 ಎಸೆತ, 1 ಬೌಂಡರಿ)ಹಾಗೂ ಅಜಿಂಕ್ಯ ರಹಾನೆ (ಔಟಾಗದೆ 29, 79 ಎಸೆತ, 4 ಬೌಂಡರಿ)ನಾಲ್ಕನೇ ವಿಕೆಟ್ ಗೆ 58 ರನ್ ಜೊತೆಯಾಟ ನಡೆಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ(34 ರನ್)ಹಾಗೂ ಶುಭಮನ್ ಗಿಲ್ (28)ಮೊದಲ ವಿಕೆಟ್ ಗೆ 62 ರನ್ ಸೇರಿಸಿ ಸಾಧಾರಣ ಆರಂಭ ನೀಡಿದರು.
ಕೈಲ್ ಜಮೀಸನ್(1-14), ನೀಲ್ ವಾಗ್ನರ್(1-28) ಹಾಗೂ ಟ್ರೆಂಟ್ ಬೌಲ್ಟ್ (1-32)ತಲಾ ಒಂದು ವಿಕೆಟ್ ಪಡೆದರು.
Next Story