ಅಫ್ಘಾನಿಸ್ತಾನದ ಟ್ವೆಂಟಿ-20 ನಾಯಕನಾಗಿ ರಶೀದ್ ಖಾನ್ ಆಯ್ಕೆ

photo: twitter/@ICC
ಹೊಸದಿಲ್ಲಿ, ಜು.6: ಯುಎಇಯಲ್ಲಿ ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯನ್ನು ಗಮನದಲ್ಲಿಟ್ಟುಕೊಂಡು ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರನ್ನು ದೇಶದ ಕ್ರಿಕೆಟ್ ಮಂಡಳಿಯು ಅಫ್ಘಾನಿಸ್ತಾನದ ಟ್ವೆಂಟಿ- 20 ತಂಡದ ನಾಯಕರಾಗಿ ಮಂಗಳವಾರ ನೇಮಕ ಮಾಡಿದೆ.
ಎಡಗೈ ಬ್ಯಾಟ್ಸ್ಮನ್ ನಜೀಬುಲ್ಲಾ ಝದ್ರಾನ್ ಅವರನ್ನು ತಂಡದ ಉಪನಾಯಕನನ್ನಾಗಿ ನೇಮಿಸಲಾಗಿದೆ.
ಟಿ-20 ಮಾದರಿ ಕ್ರಿಕೆಟ್ ನ ಬೌಲರ್ಗಳಲ್ಲಿ ವಿಶ್ವದ ನಂ .2 ಸ್ಥಾನದಲ್ಲಿರುವ ರಶೀದ್ ತನ್ನ ರಾಷ್ಟ್ರದ ಪರ ಸೇವೆ ಸಲ್ಲಿಸುವ ಒಂದು ಗೌರವ ನನಗೆ ಲಭಿಸಿದೆ ಎಂದು ಹೇಳಿದರು.
"ನಾಯಕ ತಂಡದಷ್ಟೇ ಶ್ರೇಷ್ಠನೆಂಬ ಬಗ್ಗೆ ನಾನು ಮಹಾನ್ ನಂಬಿಕೆಯುಳ್ಳವನು. ಅಫ್ಘಾನಿಸ್ತಾನವೇ ನನಗೆ ರಶೀದ್ ಖಾನ್ ಎಂಬ ಹೆಸರನ್ನು ನೀಡಿತು. ನನ್ನ ದೇಶ ಮತ್ತು ನನ್ನ ತಂಡಕ್ಕೆ ಸೇವೆ ಸಲ್ಲಿಸುವುದು ಈಗ ನನ್ನ ಕರ್ತವ್ಯವಾಗಿದೆ. ಧನ್ಯವಾದಗಳು”ಎಂದು ರಶೀದ್ ಟ್ವೀಟ್ ಮಾಡಿದ್ದಾರೆ.
Next Story





