ಒಲಿಂಪಿಕ್ಸ್: ಟೇಬಲ್ ಟೆನಿಸ್ ಸಿಂಗಲ್ಸ್ ನಿಂದ ಸೋತು ಹೊರ ನಡೆದ ಸತ್ಯನ್
photo: sportstar
ಟೋಕಿಯೊ: ತಮಗಿಂತಲೂ ಕೆಳಗಿನ ರ್ಯಾಂಕಿನಲ್ಲಿರುವ ಸ್ಪರ್ಧಿಯಿಂದ ಅಚ್ಚರಿಯ ಸೋಲಿನ ಆಘಾತ ಎದುರಿಸಿರುವ ಭಾರತದ ಟೇಬಲ್ ಟೆನಿಸ್ ಪಟು ಜಿ.ಸತ್ಯನ್ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರ ನಡೆದಿದ್ದಾರೆ.
ರವಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ವಿಶ್ವದ ನಂ.38 ರ್ಯಾಂಕಿನ ಸತ್ಯನ್ ಅವರು ಹಾಂಕಾಂಗ್ ನ ಸು ಹ್ಯಾಂಗ್ ವಿರುದ್ದ 3-4 ಅಂತರದಲ್ಲಿ ಸೋಲು ಅನುಭವಿಸಿದರು.
ಕ್ರೀಡಾಕೂಟದಲ್ಲಿ 26ನೇ ಶ್ರೇಯಾಂಕಿತ ಸತ್ಯನ್ ಅವರ ಬಳಿ ವಿಶ್ವದ 95ನೇ ರ್ಯಾಂಕಿನ ಆಟಗಾರನ ಅನಿರೀಕ್ಷಿತ ಹೊಡೆತಗಳಿಗೆ ಉತ್ತರವೇ ಇರಲಿಲ್ಲ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಜಿ.ಸತ್ಯನ್ ಭಾರತದ ಭರವಸೆಯಾಗಿದ್ದರು. ಆದರೆ ಪುರುಷ ಸಿಂಗಲ್ಸ್ ವಿಭಾಗದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.
Next Story