ಒಲಿಂಪಿಕ್ಸ್ : ಓಟದ ನಡುವೆ ಟ್ರ್ಯಾಕ್ ನಲ್ಲಿ ಬಿದ್ದರೂ ಪ್ರಥಮ ಸ್ಥಾನದೊಂದಿಗೆ ಗುರಿ ಮುಟ್ಟಿದ ಸಿಫಾನ್ ಹಸನ್
ಟೋಕಿಯೊ: ಡಚ್ ಓಟಗಾರ್ತಿ ಸಿಫಾನ್ ಹಸನ್ ಸೋಮವಾರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮಹಿಳೆಯರ 1,500 ಮೀಟರ್ ಓಟದ ಹೀಟ್ಸ್ ಸುತ್ತಿನಲ್ಲಿ ಭಾಗವಹಿಸಿದ್ದಾಗ ಆಕೆಯ ಎದುರಿನ ಕೀನ್ಯಾದ ಓಟಗಾರ್ತಿ ಎಡಿನಾ ಜೆಬಿಟಾಕ್ ಕಾಲು ಜಾರಿ ಬಿದ್ದರು. ಹಸನ್ ಆಕೆಯ ಮೇಲೆ ಬಿದ್ದರು. ಈ ದೃಶ್ಯವನ್ನು ನೋಡಿದಾಗ ಇತಿಹಾಸವನ್ನು ನಿರ್ಮಿಸುವ ಹಸನ್ ಪ್ರಯತ್ನವು ಅಪಾಯದಲ್ಲಿರುವಂತೆ ಕಂಡುಬಂತು. ಆದರೆ, ಬೇಗನೆ ಎದ್ದುನಿಂತು ಓಡಲು ಆರಂಭಿಸಿದ ಹಸನ್ 1,500 ಮೀಟರ್ ಹೀಟ್ಸ್ ನಲ್ಲಿ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
ಹಸನ್ ಓಟದ ಮಧ್ಯೆ ಬಿದ್ದರೂ ತೀವ್ರ ಪೈಪೋಟಿ ಇದ್ದ ಸ್ಪರ್ಧೆಯಲ್ಲಿ 4:05.17 ಸೆಕೆಂಡ್ ನಲ್ಲಿ ಗುರಿ ತಲುಪಿದರು. ಸೋಮವಾರ ನಡೆದ ಒಲಿಂಪಿಕ್ಸ್ ನ 5,000 ಮೀಟರ್ ಓಟದಲ್ಲಿ ಸಿಫಾನ್ ಹಸನ್ ಚಿನ್ನದ ಪದಕ ಜಯಿಸಿದ್ದಾರೆ. ಕೀನ್ಯದ ಹಿಲ್ಲೆನ್ ಒಬಿರಿ ಬೆಳ್ಳಿ ಹಾಗೂ ಇಥಿಯೋಪಿಯದ ಗುಡಾಫ್ ಸೆಗಾಯ್ ಕಂಚು ಜಯಿಸಿದರು.
What a race.#TokyoOlympics #SifanHassan pic.twitter.com/mIsZIgiDVQ
— Harry Chong Kok Ee (@HarryChongKE) August 2, 2021
Dutch star Sifan Hassan (who is attempting to win gold in the 1,500, 5K and 10K) falls just before the bell in the first round of the women’s 1,500m.
— Chris Chavez (@ChrisChavez) August 2, 2021
BUT…she gets back up and wins her heat in 4:05.17.
WHAT?! #TokyoOlympics pic.twitter.com/riUa5sjZxJ
Not your typical Monday for @SifanHassan:
— Olympics (@Olympics) August 2, 2021
- Fell during the 1500m heats.
- Got up and won the race.
- Entered the 5000m final.
- Secured #NED's first #Athletics gold since 1992. pic.twitter.com/8rJQhtcRI8