ಬೆಲ್ಗ್ರೇಡ್ಗೆ ಹೊರಟ ಭಾರತೀಯ ಬಾಕ್ಸಿಂಗ್ ತಂಡ
ವಿಶ್ವ ಚಾಂಪಿಯನ್ಶಿಪ್
photo;twitter/@thefield_in
ಹೊಸದಿಲ್ಲಿ, ಅ. 20: ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸು ವುದಕ್ಕಾಗಿ ಭಾರತೀಯ ಪುರುಷರ ಬಾಕ್ಸಿಂಗ್ ತಂಡವು ಬುಧವಾರ ಬೆಲ್ಗ್ರೇಡ್ಗೆ ಹೊರಟಿದೆ. ಪಂದ್ಯಾವಳಿಯು ಅಕ್ಟೋಬರ್ 24ರಂದು ಆರಂಭಗೊಳ್ಳಲಿದೆ.
ಏಶ್ಯನ್ ಚಾಂಪಿಯನ್ಶಿಪ್ ಪದಕ ವಿಜೇತರಾದ ದೀಪಕ್ ಕುಮಾರ್ (51 ಕೆಜಿ), ಶಿವ ಥಾಪ (63.5 ಕೆಜಿ) ಮತ್ತು ಸಂಜೀತ್ (92 ಕೆಜಿ) 13 ಸದಸ್ಯರ ತಂಡದಲ್ಲಿದ್ದಾರೆ. ಈ ವರ್ಷದ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ವಿಜೇತ ರಾದವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಪೈಕಿ, ಈ ಹಿಂದೆ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿರುವ ಅನುಭವ ಇರುವುದು ಥಾಪ ಅವರಿಗೆ ಮಾತ್ರ.
ಅವರು 2015ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದಿದ್ದಾರೆ. ಬಾಕ್ಸರ್ಗಳೊಂದಿಗೆ ಹೈ ಪರ್ಫಾಮನ್ಸ್ ನಿರ್ದೇಶಕ ಸಾಂಟಿಯಾಗೊ ನೀವ ಮತ್ತು ಹೊಸದಾಗಿ ನೇಮಕಗೊಂಡಿರುವ ಪ್ರಧಾನ ಕೋಚ್ ನರೇಂದರ್ ರಾಣಾ ತಂಡದಲ್ಲಿದ್ದಾರೆ.
ತಂಡದ ಸದಸ್ಯರ ವಿವರ: ಗೋವಿಂದ ಸಹಾನಿ (48 ಕೆಜಿ), ದೀಪಕ್ ಕುಮಾರ್ (51 ಕೆಜಿ), ಆಕಾಶ್ (54 ಕೆಜಿ), ರೋಹಿತ್ ಮೋರ್ (57 ಕೆಜಿ), ವರೀಂದರ್ ಸಿಂಗ್ (60 ಕೆಜಿ), ಶಿವ ಥಾಪ (63.5 ಕೆಜಿ), ಆಕಾಶ್ (67 ಕೆಜಿ), ನಿಶಾಂತ್ ದೇವ್ (71 ಕೆಜಿ), ಸುಮಿತ್ (75 ಕೆಜಿ), ಸಚಿನ್ ಕುಮಾರ್ (80 ಕೆಜಿ), ಲಕ್ಷ (86 ಕೆಜಿ), ಸಂಜೀತ್ (92 ಕೆಜಿ) ಮತ್ತು ನರೇಂದರ್ ರಾಣಾ (+92 ಕೆಜಿ).