ಕ್ರಿಸ್ಟಿಯಾನೋ ರೊನಾಲ್ಡೋರಂತೆ ಕೊಕೊ ಕೋಲಾ ಬಾಟಲಿಗಳನ್ನು ಅತ್ತ ಸರಿಸಿದ ಡೇವಿಡ್ ವಾರ್ನರ್
ಹೊಸದಿಲ್ಲಿ: ಫುಟ್ಬಾಲ್ ತಾರೆ ಪೋರ್ಚುಗಲ್ನ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಕೆಲ ಸಮಯದ ಹಿಂದೆ ಯುರೋಪಿಯನ್ ಚಾಂಪಿಯನ್ಶಿಪ್ ಸಂಬಂಧ ಪತ್ರಿಕಾಗೋಷ್ಠಿ ವೇಳೆ ಮೇಜಿನ ಮೇಲಿದ್ದ ಕೊಕಾ ಕೋಲಾ ಬಾಟಲಿಗಳನ್ನು ತೆಗೆದು ಅತ್ತ ಇರಿಸಿ ನಂತರ ನೀರಿನ ಬಾಟಲಿ ಕೈಗೆತ್ತಿಕೊಂಡ ವಿಚಾರ ಸಾಕಷ್ಟು ಕುತೂಹಲ ಕೆರಳಿಸಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.
ಇಂತಹುದೇ ಒಂದು ರೀತಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಗುರುವಾರ ನಡೆದುಕೊಂಡಿದ್ದಾರೆ. ಟಿ20 ವಿಶ್ವ ಕಪ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮುಂದಿನ ಮೇಜಿನಲ್ಲಿರಿಸಿದ್ದ ಕೊಕಾ ಕೋಲಾ ಬಾಟಲಿಗಳನ್ನು ಅತ್ತ ಸರಿಸಿದ್ದಾರೆ.
ಗುರುವಾರ ಆಸ್ಟ್ರೇಲಿಯಾ-ಶ್ರೀಲಂಕಾ ನಡುವಣ ಪಂದ್ಯದ ಆರಂಭಕ್ಕೆ ಮುನ್ನ ಈ ಘಟನೆ ನಡೆದಿದೆ. ಎರಡು ಕೊಕಾ ಕೋಲಾ ಬಾಟಲಿಗಳನ್ನು ಅತ್ತ ಸರಿಸಿ ಅವರು ಇರಿಸಿದ್ದಾರೆ.
"ನಾನು ಇವುಗಳನ್ನು ತೆಗೆಯಬಹುದೇ? ಆದರೂ ಅವುಗಳನ್ನು ಅಲ್ಲಿ ಇರಿಸಬೇಕಿದೆ. ಇದು ಕ್ರಿಸ್ಟಿಯಾನೋ ಅವರಿಗೆ ಒಳ್ಳೆಯದಾದರೆ, ನನಗೂ ಒಳ್ಳೆಯದೇ, ಅದು ಸರಿ" ಎನ್ನುತ್ತಾ ಅವರು ಬಾಟಲಿಗಳನ್ನು ಅತ್ತ ಇರಿಸಿದ್ದಾರೆ.
#DavidWarner does a Christiano #Ronaldo. Removes @CocaCola bottles from his press conference last night. When asked to put it back, he said, "If it's good enough for Christiano, it's good enough for me." pic.twitter.com/79iPqvagRi
— krishnamurthy (@krishna0302) October 29, 2021