ಆಕಾಶ್ ಕುಮಾರ್ ಸೆಮಿಫೈನಲ್ಗೆ
ಪದಕವೊಂದು ಖಚಿತ
photo:ywitter/@KhelNow
ಬೆಲ್ಗ್ರೇಡ್ (ಸರ್ಬಿಯ), ನ. 3: ಸರ್ಬಿಯದ ರಾಜಧಾನಿ ಬೆಲ್ಗ್ರೇಡ್ನಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ಆಕಾಶ್ ಕುಮಾರ್ 54 ಕೆಜಿ ವಿಭಾಗದಲ್ಲಿ ಮಂಗಳವಾರ ಸೆಮಿಫೈನಲ್ ತಲುಪಿದ್ದಾರೆ. ಇದರೊಂದಿಗೆ ಅವರಿಗೆ ಒಂದು ಪದಕ ಖಚಿತವಾಗಿದೆ ಹಾಗೂ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪದಕವೊಂದನ್ನು ಗೆದ್ದ ಏಳನೇ ಭಾರತೀಯ ಬಾಕ್ಸರ್ಅವರಾಗಿದ್ದಾರೆ.
ತನ್ನ ಚೊಚ್ಚಲ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುತ್ತಿರುವ 21 ವರ್ಷದ ಆಕಾಶ್, ಕ್ವಾರ್ಟರ್ಫೈನಲ್ನಲ್ಲಿ ವೆನೆಝುವೆಲದ ಯೋಲ್ ಫಿನೊಲ್ರನ್ನು 5-0 ಗೇಮ್ಗಳಿಂದ ಸೋಲಿಸಿದರು.
ಫಿನೊಲ್ 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದಿದ್ದಾರೆ.
ತನ್ನ ತಾಯಿಯನ್ನು ಕಳೆದುಕೊಂಡ ದುಃಖದೊಂದಿಗೆ ಆಕಾಶ್ ಸ್ಪರ್ಧಿಸಿದ್ದು ಎಲ್ಲರ ಗಮನ ಸೆಳೆದಿದೆ. ಅವರ ತಾಯಿ ಸಂತೋಷ್ ಸೆಪ್ಟಂಬರ್ನಲ್ಲಿ ಶ್ವಾಸಕೋಶದ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
Next Story