24 ವರ್ಷಗಳಲ್ಲಿ ಮೊದಲ ಬಾರಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಪ್ರವಾಸ:ಪಿಸಿಬಿ
photo: AP
ಹೊಸದಿಲ್ಲಿ:ಮೂರು ಟೆಸ್ಟ್ಗಳು, ಮೂರು ಏಕದಿನ ಅಂತರ್ ರಾಷ್ಟ್ರೀಯ ಪಂದ್ಯಗಳು ಹಾಗೂ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯಗಳನ್ನು ಆಡಲು ಮುಂದಿನ ವರ್ಷ ಮಾರ್ಚ್-ಎಪ್ರಿಲ್ನಲ್ಲಿ ಆಸ್ಟ್ರೇಲಿಯಾ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಸೋಮವಾರ ಪ್ರಕಟಿಸಿದೆ.
1998ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾವು 24 ವರ್ಷಗಳ ಅನುಪಸ್ಥಿತಿಯನ್ನು ಕೊನೆಗೊಳಿಸಲು ಸಜ್ಜಾಗಿದೆ.
"ಆಸ್ಟ್ರೇಲಿಯಾವು ಉತ್ತಮ ಪ್ರದರ್ಶನ ನೀಡುವ ತಂಡಗಳಲ್ಲಿ ಒಂದಾಗಿದೆ ಹಾಗೂ ಅವರು 24 ವರ್ಷಗಳ ಅಂತರದ ನಂತರ ಮೊದಲ ಬಾರಿಗೆ ನಮ್ಮ ದೇಶದಲ್ಲಿ ಆಡುತ್ತಿರುವುದು ಅಭಿಮಾನಿಗಳಿಗೆ ವಿಶೇಷ ಸತ್ಕಾರವಾಗಲಿದೆ’’ ಎಂದು ಪಿಸಿಬಿ ಅಧ್ಯಕ್ಷ ರಮೀಝ್ ರಾಜಾ ಹೇಳಿದ್ದಾರೆ.
Next Story