ಫುಟ್ಬಾಲ್ ಇತಿಹಾಸದಲ್ಲಿ ವೃತ್ತಿಜೀವನದ 800 ಗೋಲುಗಳನ್ನು ಗಳಿಸಿದ ಮೊದಲ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ
Photo credit: Twitter/@Cristiano
ಮ್ಯಾಡ್ರಿಡ್: ಪೋರ್ಚುಗಲ್ ನ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಈಗ ಫುಟ್ಬಾಲ್ ಇತಿಹಾಸದಲ್ಲಿ ವೃತ್ತಿಜೀವನದ 800 ಗೋಲುಗಳನ್ನು ಗಳಿಸಿದ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದಾರೆ
ರೊನಾಲ್ಡೊ ಓಲ್ಡ್ ಟ್ರ್ಯಾಫೋರ್ಡ್ನಲ್ಲಿ ಅವಳಿ ಗೋಲು ಗಳಿಸಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡವು ಆರ್ಸೆನಲ್ ವಿರುದ್ಧ 3-2 ಅಂತರದಿಂದ ಜಯ ಸಾಧಿಸಲು ನೆರವಾದರು. ಈ ಮೂಲಕ ವೃತ್ತಿಜೀವನದ ಮಹತ್ವದ ಮೈಲಿಗಲ್ಲನ್ನು ತಲುಪಿದರು.
ವಿಶಿಷ್ಟವಾಗಿ ಅವರು ಕೆಲವೇ ನಿಮಿಷಗಳ ನಂತರ ಪ್ರಬಲ ಪೆನಾಲ್ಟಿಯೊಂದಿಗೆ 801ನೇ ಗೋಲು ಗಳಿಸಿದರು. ಐದು ಬಾರಿಯ ಬ್ಯಾಲನ್ ಡಿ ಓರ್ ಪ್ರಶಸ್ತಿ ವಿಜೇತ ರೊನಾಲ್ಡೊ ಗುರುವಾರ ಪ್ರೀಮಿಯರ್ ಲೀಗ್ ನಲ್ಲಿ ಎರಡು ಗೋಲು ಗಳಿಸಿದ್ದಾರೆ.
Next Story