ಏಶ್ಯನ್ ಚಾಂಪಿಯನ್ಸ್ ಟ್ರೋಫಿ: ಸೆಮಿ ಫೈನಲ್ ನಲ್ಲಿ ಜಪಾನ್ಗೆ ಶರಣಾದ ಭಾರತ
Photo: TOI
ಢಾಕಾ, ಡಿ.21: ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಮೆಂಟ್ನ ಎರಡನೇ ಸೆಮಿ ಫೈನಲ್ನಲ್ಲಿ ಭಾರತದ ಪುರುಷರ ತಂಡವು ಜಪಾನ್ ವಿರುದ್ಧ 3-5 ಗೋಲುಗಳ ಅಂತರದಿಂದ ಸೋಲುಂಡಿದೆ. ಮೂರನೇ ಸ್ಥಾನಕ್ಕಾಗಿ ನಡೆಯುವ ಪ್ಲೇ-ಆಫ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ 60ನೆ ನಿಮಿಷದಲ್ಲಿ ಗೋಲು ಗಳಿಸಿದ ಹಾರ್ದಿಕ್ ಭಾರತದ ಸೋಲಿನ ಅಂತರವನ್ನು ತಗ್ಗಿಸಿದರು.
ಭಾರತವು ತನ್ನ ಕೊನೆಯ ರೌಂಡ್ ರಾಬಿನ್ ಹಂತದ ಪಂದ್ಯದಲ್ಲಿ ಜಪಾನ್ ತಂಡವನ್ನು 6-0 ಅಂತರದಿಂದ ಸೋಲಿಸಿತ್ತು. ಇದೀಗ ಭರ್ಜರಿ ಜಯ ಸಾಧಿಸಿರುವ ಜಪಾನ್ ಸೋಲಿಗೆ ತಕ್ಕ ಸೇಡು ತೀರಿಸಿಕೊಂಡು ಫೈನಲ್ಗೆ ಲಗ್ಗೆ ಇಟ್ಟಿದೆ.
Next Story