ಮೊದಲ ಟೆಸ್ಟ್ ಪಂದ್ಯಾಟದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ ಗೆಲುವು
Photo: Twitter/BCCI
ಗುರುವಾರ ಸೆಂಚುರಿಯನ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಆರಂಭಿಕ ಟೆಸ್ಟ್ನ ಐದನೇ ದಿನವಾದ ಗುರುವಾರ ಊಟದ ವಿರಾಮದ ನಂತರ ಭಾರತವು ದಕ್ಷಿಣ ಆಫ್ರಿಕಾದ ಉಳಿದ ಮೂರು ವಿಕೆಟ್ಗಳನ್ನು ಕಿತ್ತು 113 ರನ್ಗಳ ಜಯ ಸಾಧಿಸಿತು. ಈ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
ಊಟದ ನಂತರ ಪಂದ್ಯಾಟವನ್ನು ಪುನರಾರಂಭಿಸಿದ ಆತಿಥೇಯರ ಕೊನೆಯ ಎರಡು ವಿಕೆಟ್ ಗಳನ್ನು ಕಬಳಿಸಿದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿರಾಮದ ನಂತರ ಕೇವಲ ಒಂಬತ್ತು ರನ್ಗಳನ್ನು ಮಾತ್ರ ಪೂರೈಸಲು ಅವಕಾಶ ಮಾಡಿಕೊಟ್ಟರು.
ಇದಕ್ಕೂ ಮುನ್ನ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಭಾರತವನ್ನು ಗೆಲುವಿನ ಅಂತರವನ್ನು ಅಂತರದಲ್ಲೇ ನಿಲ್ಲಿಸಿ ಸೂಪರ್ ಸ್ಪೋರ್ಟ್ ಪಾರ್ಕ್ನಲ್ಲಿ ಊಟದ ವಿರಾಮದ ವೇಳೆಗೆ ಆತಿಥೇಯರನ್ನು 7 ವಿಕೆಟ್ಗೆ 182 ಕ್ಕೆ ಕಟ್ಟಿಹಾಕಿದ್ದರು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಕೆ.ಎಲ್ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
Superb bowling by an attack that can pick 20 wickets in a Test match anywhere in the world.
— Sachin Tendulkar (@sachin_rt) December 30, 2021
Congratulations to #TeamIndia on a convincing victory!#SAvIND pic.twitter.com/2TGI41kH7B
Wohoo Brisbane, Oval, Lord’s and now Centurion…Congratulations @imVkohli, Rahul Dravid and the entire contingent on becoming the first Asian nation to win at Centurion #BoxingDayTest #TeamIndia pic.twitter.com/k9zTHE1nWQ
— Ravi Shastri (@RaviShastriOfc) December 30, 2021