ಐಪಿಎಲ್: ಆರ್ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್ ಜಯಭೇರಿ
ಪ್ಲೆಸಿಸ್,ಕೊಹ್ಲಿ, ಕಾರ್ತಿಕ್ ಹೋರಾಟ ವ್ಯರ್ಥ
ನವಿಮುಂಬೈ, ಮಾ.27: ಇನಿಂಗ್ಸ್ ಅಂತ್ಯದಲ್ಲಿ ಆಲ್ರೌಂಡರ್ ಒಡಿಯನ್ ಸ್ಮಿತ್(ಔಟಾಗದೆ 25, 8 ಎಸೆತ, 1 ಬೌಂಡರಿ, 3 ಸಿಕ್ಸರ್) ಹಾಗೂ ಬ್ಯಾಟರ್ ಶಾರೂಕ್ ಖಾನ್(ಔಟಾಗದೆ 24, 20 ಎಸೆತ,1 ಬೌಂಡರಿ, 2 ಸಿಕ್ಸರ್ ) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 15ನೇ ಆವೃತ್ತಿಯ ಐಪಿಎಲ್ನ 3ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ)ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ 5 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿ ಗೆಲುವಿನಾರಂಭ ಪಡೆದಿದೆ.
ರವಿವಾರ ಇಲ್ಲಿನ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ಗೆಲ್ಲಲು 206 ರನ್ ಗುರಿ ಪಡೆದಿದ್ದ ಪಂಜಾಬ್ ಕಿಂಗ್ಸ್ 19 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿ ಗೆಲುವಿನ ನಗೆ ಬೀರಿದೆ.
ಮೊದಲ ವಿಕೆಟ್ಗೆ ಶಿಖರ್ ಧವನ್(43, 29 ಎಸೆತ) ಅವರೊಂದಿಗೆ 71 ರನ್ ಜೊತೆಯಾಟ ನಡೆಸಿರುವ ನಾಯಕ ಮಯಾಂಕ್ ಅಗರ್ವಾಲ್ 32 ರನ್ ಗಳಿಸಿ ಔಟಾದರು. ಭಾನುಕ ರಾಜಪಕ್ಸ(43 ರನ್,22 ಎಸೆತ) ಹಾಗೂ ಲಿಯಾಮ್ ಲಿವಿಂಗ್ಸ್ಟೋನ್(19) ಒಂದಷ್ಟು ಹೋರಾಟ ನೀಡಿದರು.
Next Story