ಆಸ್ಟ್ರೇಲಿಯ ಪುರುಷರ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿ ನ್ಯೂಝಿಲ್ಯಾಂಡ್ನ ಮಾಜಿ ನಾಯಕ ಡೇನಿಯಲ್ ವೆಟೋರಿ ನೇಮಕ
Photo:AFP
ಮೆಲ್ಬೋರ್ನ್: ಆಸ್ಟ್ರೇಲಿಯ ಪುರುಷರ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿ ನ್ಯೂಝಿಲ್ಯಾಂಡ್ನ ಮಾಜಿ ನಾಯಕ ಡೇನಿಯಲ್ ವೆಟೋರಿ ಮಂಗಳವಾರ ನೇಮಕಗೊಂಡಿದ್ದಾರೆ.
ವೆಟೋರಿ ಅವರು ಪ್ರಮುಖ ಕೋಚ್ ಆಂಡ್ರ್ಯೂ ಮೆಕ್ಡೊನಾಲ್ಡ್ಗೆ ಸಹಾಯಕರನ್ನಾಗಿ ಹೆಸರಿಸಲಾಗಿದೆ, ನ್ಯೂಝಿಲ್ಯಾಂಡ್ ನ ಮಾಜಿ ನಾಯಕನ ಜ್ಞಾನ ಹಾಗೂ ಅನುಭವವು ಅಮೂಲ್ಯವಾದುದು ಎಂದು ಮೆಕ್ ಡೊನಾಲ್ಡ್ ಹೇಳಿದರು.
ಆಲ್-ರೌಂಡರ್ ವೆಟೋರಿ ಕಿವೀಸ್ ಪರ 113 ಟೆಸ್ಟ್ ಹಾಗೂ 295 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗೆ ಮೆಕ್ಡೊನಾಲ್ಡ್ ಜೊತೆಗೆ ಕೆಲಸ ಮಾಡಿದ್ದರು.
ಜಸ್ಟಿನ್ ಲ್ಯಾಂಗರ್ ಮುಖ್ಯ ಕೋಚ್ ಸ್ಥಾನ ತೊರೆದ ನಂತರ ಎಪ್ರಿಲ್ನಲ್ಲಿ ಮೆಕ್ಡೊನಾಲ್ಡ್ ಮುಖ್ಯ ತರಬೇತುದಾರರಾಗಿ ಭಡ್ತಿ ಪಡೆದಿದ್ದರು .
Next Story