14ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ ರಫೆಲ್ ನಡಾಲ್
ವೃತ್ತಿಜೀವನದ 22ನೇ ಗ್ರಾನ್ಸ್ಲಾಮ್ ಪ್ರಶಸ್ತಿಯನ್ನು ಬಾಚಿಕೊಂಡ ಸ್ಪೇನ್ ಸೂಪರ್ ಸ್ಟಾರ್
ಪ್ಯಾರಿಸ್, ಜೂ.5: ನಾರ್ವೆಯ ಕಾಸ್ಪರ್ ರೂಡ್ ಅವರನ್ನು ನೇರ ಸೆಟ್ಗಳ ಅಂತರದಿಂದ ಮಣಿಸಿದ ಸ್ಪೇನ್ ಸೂಪರ್ ಸ್ಟಾರ್ ರಫೆಲ್ ನಡಾಲ್ 14ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಜಯಿಸಿ ದಾಖಲೆ ನಿರ್ಮಿಸಿದರು.
ರವಿವಾರ ನಡೆದ ಪುರುಷರ ಸಿಂಗಲ್ಸ್ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ನಡಾಲ್ ಅವರು ವಿಶ್ವದ ನಂ.8ನೇ ಆಟಗಾರ ರೂಡ್ ಅವರನ್ನು 6-3, 6-3, 6-0 ಸೆಟ್ಗಳ ಅಂತರದಿಂದ ಮಣಿಸಿ ವೃತ್ತಿಜೀವನದ 22ನೇ ಗ್ರಾನ್ಸ್ಲಾಮ್ ಪ್ರಶಸ್ತಿಯನ್ನು ಬಾಚಿಕೊಂಡರು.
ನಡಾಲ್ ಇದೇ ಮೊದಲ ಬಾರಿ ಒಂದೇ ವರ್ಷದಲ್ಲಿ ಆಸ್ಟ್ರೇಲಿಯನ್ ಓಪನ್ ಹಾಗೂ ಫ್ರೆಂಚ್ ಓಪನ್(ವರ್ಷದ ಮೊದಲೆರಡು ಗ್ರಾನ್ಸ್ಲಾಮ್ ಟೂರ್ನಿ) ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದರು. 36ರ ವಯಸ್ಸಿನ ನಡಾಲ್ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ ಹಿರಿಯ ಟೆನಿಸ್ ಪಟು ಎಂಬ ಹಿರಿಮೆಗೆ ಪಾತ್ರರಾದರು.
Next Story