ಕಾಮನ್ ವೆಲ್ತ್ ಗೇಮ್ಸ್: ಮಿಶ್ರ ಡಬಲ್ಸ್ ಟೇಬಲ್ ಟೆನಿಸ್ ನಲ್ಲಿ ಶರತ್ ಕಮಲ್-ಶ್ರೀಜಾ ಅಕುಲಾ ಜೋಡಿಗೆ ಚಿನ್ನ

Photo:twitter
ಬರ್ಮಿಂಗ್ ಹ್ಯಾಮ್: ಭಾರತದ ಟೇಬಲ್ ಟೆನಿಸ್ ದಂತಕಥೆ ಅಚಂತಾ ಶರತ್ ಕಮಲ್ ಅವರು ಯುವ ಆಟಗಾರ್ತಿ ಶ್ರೀಜಾ ಅಕುಲಾ ಅವರೊಂದಿಗೆ ರವಿವಾರ ಇಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಶರತ್ ಹಾಗೂ ಅಕುಲಾ ಜೋಡಿಯು ಚಿನ್ನದ ಪದಕ ಸ್ಪರ್ಧೆಯಲ್ಲಿ ಮಲೇಷ್ಯಾದ ಜಾವೆನ್ ಚೂಂಗ್ ಹಾಗೂ ಕರೆನ್ ಲೈನ್ ಅವರನ್ನು 11-4, 9-11, 11-5, 11-6 ಅಂತರದಿಂದ ಸೋಲಿಸಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು.
ಗೋಲ್ಡ್ ಕೋಸ್ಟ್ನಲ್ಲಿ ನಡೆದ ಕಳೆದ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ 40 ವರ್ಷದ ಶರತ್ ಟಿಟಿ ಸಿಂಗಲ್ಸ್ ವಿಭಾಗದಲ್ಲಿ ಇಂಗ್ಲೆಂಡ್ ನ ಪೌಲ್ ಡ್ರಿಂಕ್ಹಾಲ್ ಅವರನ್ನು 11-8, 11-8, 8-11, 11-7, 9-11, 11-8 ಸೆಟ್ಗಳಿಂದ ಸೋಲಿಸಿದರು. ತನ್ನ ಎರಡನೇ ಕಾಮನ್ ವೆಲ್ತ್ ಗೇಮ್ಸ್ ಫೈನಲ್ ತಲುಪಿದ್ದಾರೆ.
Next Story





