ಏಷ್ಯಾ ಕಪ್ ಟಿ-20: ಪಾಕಿಸ್ತಾನದ ವಿರುದ್ಧ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ
File Photo
ದುಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಾಟವು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯಾಟದಲ್ಲಿ ಭಾರತ ತಂಡವು ಟಾಸ್ ಗೆದ್ದುಕೊಂಡಿದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಪಾಕಿಸ್ತಾನದ ಯುವ ವೇಗಿ ನಸೀಮ್ ಷಾ ಇಂದು ತಮ್ಮ T20I ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇಂದು ಭಾರತ ವಿರುದ್ಧದ ಪಂದ್ಯದ ಗಂಟೆಗಳ ಮೊದಲು ಮಾಹಿತಿ ನೀಡಿದೆ. ಸುಮಾರು ಒಂದು ವರ್ಷದ ನಂತರ ಭಾರತವು ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯವನ್ನು ಆಡುತ್ತದೆ.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಎರಡು ತಂಡಗಳು ಪರಸ್ಪರರ ವಿರುದ್ಧ ಕೊನೆಯ ಬಾರಿಗೆ ಟಿ20 ವಿಶ್ವಕಪ್ ನಲ್ಲಿ ಮುಖಾಮುಖಿಯಾಗಿದ್ದು, ಪಂದ್ಯದ ದಿನದಂದು ಬಾಬರ್ ಅಝಮ್ ನೇತೃತ್ವದ ತಂಡವು ತಮ್ಮ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ 10 ವಿಕೆಟ್ಗಳ ಜಯವನ್ನು ದಾಖಲಿಸಿತ್ತು.
Next Story