ಮಹಿಳಾ ಏಶ್ಯಕಪ್: ಸತತ 8ನೇ ಬಾರಿ ಫೈನಲ್ ತಲುಪಿದ ಭಾರತ
Photo:twitter
ಹೊಸದಿಲ್ಲಿ: ಶೆಫಾಲಿ ವರ್ಮಾ(42 ರನ್, 28 ಎಸೆತ) ಹಾಗೂ ದೀಪ್ತಿ ಶರ್ಮಾ (3-7) ಅಮೋಘ ಆಟದ ನೆರವಿನಿಂದ ಥಾಯ್ಲೆಂಡ್ ತಂಡವನ್ನು ಮಣಿಸಿದ ಭಾರತವು ಮಹಿಳಾ ಏಷ್ಯಾಕಪ್ ಪಂದ್ಯಾವಳಿಯ ಇತಿಹಾಸದಲ್ಲಿ ಸತತ 8 ನೇ ಬಾರಿಗೆ ಫೈನಲ್ ತಲುಪಿದೆ.
ಗುರುವಾರ ಸಿಲ್ಹಟ್ ನಲ್ಲಿ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ 20 ಓವರ್ ಗಳಲ್ಲಿ 8 ವಿಕೆಟಿಗೆ 148 ರನ್ ಗಳಿಸಿದ ಭಾರತ ಎದುರಾಳಿ ಥಾಯ್ಲೆಂಡ್ ತಂಡವನ್ನು 20 ಓವರ್ ಗಳಲ್ಲಿ 9 ವಿಕೆಟಿಗೆ 74 ರನ್ ಗೆ ನಿಯಂತ್ರಿಸಿತು. 74 ರನ್ಗಳಿಂದ ಸೋಲಿಸಿತು.
ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಎರಡನೇ ಸೆಮಿಫೈನಲ್ನ ವಿಜೇತರನ್ನು ಭಾರತ ಶನಿವಾರ ಸಿಲ್ಹೆಟ್ನಲ್ಲಿ ನಡೆಯುವ ಫೈನಲ್ನಲ್ಲಿ ಎದುರಿಸಲಿದೆ.
ಮಹಿಳಾ ಏಶ್ಯ ಕಪ್ ಟೂರ್ನಮೆಂಟ್ನ ಎಲ್ಲಾ 8 ಆವೃತ್ತಿಗಳಲ್ಲಿ ಭಾರತ ಫೈನಲ್ಗೆ ತಲುಪಿದೆ. 7 ಬಾರಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಭಾರತವು 2018 ರ ಹಿಂದಿನ ಆವೃತ್ತಿಯ ಏಶ್ಯಕಪ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ಸೋತಿತ್ತು. ಆದರೆ ಗುಂಪು ಹಂತದಲ್ಲಿ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಸೋಲಿಗೆ ಸೇಡು ತೀರಿಸಿಕೊಂಡಿದೆ.