ಮೊದಲ ಏಕದಿನ: ನ್ಯೂಝಿಲ್ಯಾಂಡ್ ಗೆ 307 ರನ್ ಗುರಿ ನೀಡಿದ ಭಾರತ
ಶ್ರೇಯಸ್ ಅಯ್ಯರ್, ಶಿಖರ್ ಧವನ್, ಶುಭಮನ್ ಗಿಲ್ ಅರ್ಧಶತಕ
ಶ್ರೇಯಸ್ ಅಯ್ಯರ್, ಶಿಖರ್ ಧವನ್, ಶುಭಮನ್ ಗಿಲ್ ಅರ್ಧಶತಕ
ಆಕ್ಲಂಡ್,ನ.25: ಶ್ರೇಯಸ್ ಅಯ್ಯರ್(80 ರನ್, 76 ಎಸೆತ), ಶಿಖರ್ ಧವನ್(72 ರನ್, 77 ಎಸೆತ) ಹಾಗೂ ಶುಭಮನ್ ಗಿಲ್(50 ರನ್, 65 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತ ಕ್ರಿಕೆಟ್ ತಂಡ ಆತಿಥೇಯ ನ್ಯೂಝಿಲ್ಯಾಂಡ್ ತಂಡಕ್ಕೆ ಮೊದಲ ಏಕದಿನ ಪಂದ್ಯದ ಗೆಲುವಿಗೆ 307 ರನ್ ಗುರಿ ನೀಡಿದೆ.
ಶುಕ್ರವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತವು ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿದೆ. ಇನಿಂಗ್ಸ್ ಆರಂಭಿಸಿದ ನಾಯಕ ಧವನ್ ಹಾಗೂ ಗಿಲ್ ಮೊದಲ ವಿಕೆಟ್ ಗೆ 124 ರನ್ ಜೊತೆಯಾಟ ನಡೆಸಿ ಭರ್ಜರಿ ಆರಂಭ ಒದಗಿಸಿದರು.
5ನೇ ವಿಕೆಟ್ ಜೊತೆಯಾಟದಲ್ಲಿ 94 ರನ್ ಸೇರಿಸಿದ ಸ್ಯಾಮ್ಸನ್ (36 ರನ್) ಹಾಗೂ ಶ್ರೇಯಸ್ ಅಯ್ಯರ್ ತಂಡದ ಮೊತ್ತವನ್ನು ಹಿಗ್ಗಿಸಿದರು.
ನ್ಯೂಝಿಲ್ಯಾಂಡ್ ಪರ ಟಿಮ್ ಸೌಥಿ (3-73) ಹಾಗೂ ಲಾಕಿ ಫರ್ಗ್ಯುಸನ್ (3-59) ತಲಾ ಮೂರು ವಿಕೆಟ್ ಗಳನ್ನು ಕಬಳಿಸಿದರು.
Next Story