ಅರ್ಜೆಂಟೀನಾವನ್ನು ಬಗ್ಗುಬಡಿದ ಸೌದಿ ಆಟಗಾರರಿಗೆ ರೋಲ್ಸ್ ರಾಯ್ಸ್ ಉಡುಗೊರೆ ನೀಡಲಿರುವ ರಾಜ ಕುಟುಂಬ ?
ʼವದಂತಿʼ ಮಾತ್ರವೆಂದು ಸ್ಪಷ್ಟನೆ ನೀಡಿದ ಸೌದಿ ಆಟಗಾರ
ಕತಾರ್: ಕತಾರ್ನ ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ಗಳಾದ ಆರ್ಜಂಟಿನಾ ತಂಡವನ್ನು 2-1 ಅಂತರದಲ್ಲಿ ಸೋಲಿಸಿ ಅಚ್ಚರಿ ಮೂಡಿಸಿದ ಸೌದಿ ಅರೇಬಿಯಾದ ತಂಡದ ಪ್ರತಿಯೋರ್ವ ಸದಸ್ಯನಿಗೆ ಐಷಾರಾಮಿ ರೋಲ್ಸ್ ರಾಯ್ಸ್ ಕಾರನ್ನು ಅವರ ದೇಶದ ರಾಜಮನೆತನ ಉಡುಗೊರೆಯಾಗಿ ನೀಡಲಿದೆ ಎಂದು ವರದಿಯಾಗಿದ್ದು, ಈ ನಡುವೆ ಇದೊಂದು ವದಂತಿ ಮಾತ್ರವೆಂದು ಸೌದಿ ಅರೇಬಿಯಾ ತಂಡದ ಆಟಗಾರ ಸುದ್ದಿಯನ್ನು ಅಲ್ಲಗಳೆದಿದ್ದಾಗಿ arabnews ವರದಿ ಮಾಡಿದೆ.
ಸೌದಿ ಅರೇಬಿಯಾದ ತಂಡ ತನ್ನ ತವರು ದೇಶಕ್ಕೆ ಮರಳಿದ ನಂತರ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಅವರು ತಂಡದ ಪ್ರತಿ ಆಟಗಾರನಿಗೆ ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ಉಡುಗೊರೆಯಾಗಿ ನೀಡಲಿದ್ದಾರೆ ಎಂದು ಹಲವೆಡೆ ವರದಿಯಾಗಿತ್ತು.
ವಿಜಯದ ಸಂಭ್ರಮಾಚರಿಸಲು ರಜೆಯನ್ನು ಘೋಷಿಸುವ ರಾಜಕುಮಾರನ ಸಲಹೆಗೆ ಸೌದಿ ದೊರೆ ಒಪ್ಪಿದ ಬಳಿಕ ಎಲ್ಲಾ ಖಾಸಗಿ ಮತ್ತು ಸರಕಾರಿ ರಂಗದ ಉದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ರಜೆಯೂ ದೊರಕಿತ್ತು.
ಸೌದಿ ಅರೇಬಿಯಾ ಈ ಹಿಂದಿನ ವಿಶ್ವ ಕಪ್ ಪಂದ್ಯಾವಳಿಗಳಲ್ಲಿ ಕೇವಲ ಮೂರು ಪಂದ್ಯಗಳನ್ನು ಗೆದ್ದಿದೆ.