ಬ್ರೆಝಿಲ್ ದಂತಕತೆ ಪೀಲೆ ದಾಖಲೆ ಮುರಿದ ಎಂಬಾಪೆ
ದೋಹಾ: 23 ರ ಹರೆಯದ ದ ಫ್ರೆಂಚ್ ಫುಟ್ಬಾಲ್ ಆಟಗಾರ ಕೀಲಿಯನ್ ಎಂಬಾಪೆ ಅವರು ರವಿವಾರ ನಡೆದ FIFA ವಿಶ್ವಕಪ್ 2022 ನ ಅಂತಿಮ-16ರ ಪಂದ್ಯದಲ್ಲಿ ಪೋಲ್ಯಾಂಡ್ ವಿರುದ್ಧ 2 ಗೋಲು ಗಳಿಸಿದ ನಂತರ ಬ್ರೆಝಿಲ್ನ ಫುಟ್ಬಾಲ್ ದಂತಕಥೆ ಪೀಲೆ ಅವರ ದಾಖಲೆಯನ್ನು ಮುರಿದಿದ್ದಾರೆ.
ಎಂಬಾಪೆ FIFA ವಿಶ್ವಕಪ್ನಲ್ಲಿ ಅತ್ಯಂತ ಹೆಚ್ಚು ಗೋಲು ಗಳಿಸಿದ 24 ವರ್ಷದೊಳಗಿನ ಆಟಗಾರರಾಗಿದ್ದಾರೆ. ಪ್ಯಾರಿಸ್ ಸೇಂಟ್-ಜರ್ಮೈನ್ ಸ್ಟಾರ್ ಎಂಬಾಪೆ ಈಗ ವಿಶ್ವಕಪ್ ನಲ್ಲಿ ಒಟ್ಟು 9 ಗೋಲುಗಳನ್ನು ಗಳಿಸಿದ್ದಾರೆ. 2018 ರ ವಿಶ್ವಕಪ್ ವಿಜೇತ ಎಂಬಾಪೆ ಈಗ ಡಿಗೋ ಮರಡೋನಾ, ಲಿಯೊನೆಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ, ಪೀಲೆಯಂತಹ ಆಟಗಾರರನ್ನು ಹಿಂದಿಕ್ಕಿದ್ದಾರೆ.
ಈಗ ಒಟ್ಟು 9 ಗೋಲು ಗಳಿಸಿರುವ ಎಂಬಾಪೆ ಲಿಯೊನೆಲ್ ಮೆಸ್ಸಿ ಸಾಧನೆ ಸರಿಗಟ್ಟಿದ್ದಾರೆ. ಮೆಸ್ಸಿ ಕೂಡ 9 ಗೋಲು ಗಳಿಸಿದ್ದಾರೆ. ಆದರೆ ಎಂಬಾಪೆ ತನ್ನ 2ನೇ ವಿಶ್ವಕಪ್ ನಲ್ಲಿ ಈ ಸಾಧನೆ ಮಾಡಿದ್ದಾರೆ.
Kylian Mbappé.
— Fabrizio Romano (@FabrizioRomano) December 4, 2022
9 World Cup goals in 2 editions.
More than legends as Diego Maradona, Cristiano Ronaldo, Suárez, Neymar, Thierry Henry, Rivaldo, Kempes… and more.
Same goals as Lionel Messi — but 3 World Cups less than the Argentinian star.
…and still counting. He’s 23. pic.twitter.com/YnEJDMHzj3