ನ್ಯೂಝಿಲ್ಯಾಂಡ್ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಕೇನ್ ವಿಲಿಯಮ್ಸನ್
ವೆಲ್ಲಿಂಗ್ಟನ್: ಕೇನ್ ವಿಲಿಯಮ್ಸನ್ Kane Williamson ಗುರುವಾರ ನ್ಯೂಝಿಲ್ಯಾಂಡ್ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ. 32 ವರ್ಷದ ಅವರು ಆರು ವರ್ಷಗಳಿಗೂ ಹೆಚ್ಚು ಕಾಲ ಕಿವೀಸ್ನ ನಾಯಕತ್ವ ವಹಿಸಿದ್ದರು, ಕಿವೀಸ್ ತಂಡವನ್ನು ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರಶಸ್ತಿಯತ್ತ ಮುನ್ನಡೆಸಿದರು.
ಆದಾಗ್ಯೂ ವಿಲಿಯಮ್ಸನ್ ಏಕದಿನ ಹಾಗೂ ಟಿ20 ತಂಡಗಳ ನಾಯಕತ್ವವನ್ನು ಮುಂದುವರಿಸಲಿದ್ದಾರೆ.
ಅನುಭವಿ ವೇಗದ ಬೌಲರ್ ಟಿಮ್ ಸೌಥಿ ಅವರನ್ನು ವಿಲಿಯಮ್ಸನ್ ಅವರಿಂದ ತೆರವಾದ ಟೆಸ್ಟ್ ನಾಯಕನ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.
2016 ರಿಂದ ನ್ಯೂಝಿಲ್ಯಾಂಡ್ ತಂಡವನ್ನು ಮುನ್ನಡೆಸುತ್ತಿರುವ 32 ವರ್ಷದ ವಿಲಿಯಮ್ಸನ್, "ಟೆಸ್ಟ್ ಕ್ರಿಕೆಟ್ನಲ್ಲಿ ಬ್ಲ್ಯಾಕ್ ಕ್ಯಾಪ್ಸ್ನ ನಾಯಕತ್ವವು ನಂಬಲಾಗದಷ್ಟು ವಿಶೇಷ ಗೌರವವಾಗಿದೆ" ಎಂದು ಹೇಳಿದರು.
ನ್ಯೂಝಿಲ್ಯಾಂಡ್ ತಂಡವನ್ನು 40 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿರುವ ವಿಲಿಯಮ್ಸನ್ 22 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ.
ಅವರ 24 ಟೆಸ್ಟ್ ಶತಕಗಳಲ್ಲಿ ಹನ್ನೊಂದು ಶತಕವು ಅವರು ನಾಯಕರಾಗಿದ್ದಾಗ ಗಳಿಸಿದ್ದಾರೆ. ಇದು ನ್ಯೂಝಿಲ್ಯಾಂಡ್ ನಾಯಕನ ದಾಖಲೆಯಾಗಿದೆ.
34ರ ಹರೆಯದ ಸೌಥಿ ಅವರು ಮುಂಬರುವ ಪಾಕಿಸ್ತಾನ ಪ್ರವಾಸದಲ್ಲಿ ಕರಾಚಿಯಲ್ಲಿ ಡಿಸೆಂಬರ್ 26 ರಿಂದ ನಡೆಯುವ ಟೆಸ್ಟ್ ಪಂದ್ಯದಲ್ಲಿ ತಂಡವನ್ನ ನಾಯಕನಾಗಿ ಮುನ್ನಡೆಸಲಿದ್ದಾರೆ, ಮುಲ್ತಾನ್ನಲ್ಲಿ ಜನವರಿ 3 ರಿಂದ 2ನೇ ಟೆಸ್ಟ್ ಆರಂಭವಾಗುತ್ತದೆ.