ಗೂಂಡಾಗಳಿಲ್ಲದ ಫುಟ್ಬಾಲ್ ಟೂರ್ನಮೆಂಟ್: ಖತರ್ ವಿಶ್ವಕಪ್ ಆಯೋಜನೆಯ ಬಗ್ಗೆ ಪೀಟರ್ಸನ್ ಪ್ರಶಂಸೆ
ಪ್ರತಿ ಫುಟ್ಬಾಲ್ ಪಂದ್ಯಾವಳಿಯನ್ನು ಮಧ್ಯಪ್ರಾಚ್ಯದಲ್ಲಿ ನಡೆಸಬೇಕು ಎಂದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ
ಲಂಡನ್: ಇಂಗ್ಲೆಂಡ್ ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ (Former England cricketer Kevin Pietersen) ಅವರು 2022 ರ ಫಿಫಾ ವಿಶ್ವಕಪ್ ಅನ್ನು ಯಶಸ್ವಿಯಾಗಿ ಆಯೋಜಿಸಿರುವ ಖತರ್ ದೇಶವನ್ನು ಶ್ಲಾಘಿಸಿದ್ದಾರೆ. ಪ್ರತಿ ಫುಟ್ಬಾಲ್ ಪಂದ್ಯಾವಳಿಯನ್ನು ಮಧ್ಯಪ್ರಾಚ್ಯದಲ್ಲಿ ನಡೆಸಬೇಕು ಎಂದು ಹೇಳಿದ್ದಾರೆ.
ಮಾಜಿ ಇಂಗ್ಲೆಂಡ್ ಬ್ಯಾಟರ್ ಪೀಟರ್ಸನ್ 2022 ರ ಫಿಫಾ ವಿಶ್ವಕಪ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಟ್ವಿಟರ್ ನಲ್ಲಿ ವ್ಯಕ್ತಪಡಿಸಿದರು. ಇದು ಗೂಂಡಾಗಳಿಲ್ಲದ ಉತ್ತಮ ಪಂದ್ಯಾವಳಿ ಎಂದು ಹೇಳಿದರು.
“ಗೂಂಡಾಗಳು ಇಲ್ಲದ ಒಂದು ಫುಟ್ಬಾಲ್ ಪಂದ್ಯಾವಳಿ. ಕಳೆದ ವರ್ಷದ ವೆಂಬ್ಲಿಯಲ್ಲಿ ನಡೆದ ನಾಚಿಕೆಗೇಡಿನ ಘಟನೆ. ಈ ಬಾರಿ ಖತರ್ ನಲ್ಲಿ ನಡೆದ ಪಂದ್ಯಾವಳಿ, ಇವರೆಡನ್ನು ಹೋಲಿಸಿದರೆ ಖತರ್ ನಲ್ಲಿ ನಡೆದ ಪಂದ್ಯಾವಳಿ ಅತ್ಯುತ್ತಮವಾಗಿದೆ! ಪ್ರತಿ ಫುಟ್ಬಾಲ್ ಪಂದ್ಯಾವಳಿಯು ಮಧ್ಯ ಪ್ರಾಚ್ಯದಲ್ಲಿ ನಡೆಸುವುದು ಒಳ್ಳೆಯದು . ನಮ್ಮ ಅಭಿಮಾನಿಗಳ ಅನುಭವವು ಸ್ಮರಣೀಯವಾಗಿರುತ್ತದೆ! ”ಎಂದು ಪೀಟರ್ಸನ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಲುಸೈಲ್ ಸ್ಟೇಡಿಯಮ್ ನಲ್ಲಿ ರವಿವಾರ ರೋಚಕವಾಗಿ ಸಾಗಿದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನ ತಂಡ ಫ್ರಾನ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ ಮಣಿಸಿ ಮೂರನೇ ಬಾರಿ ಪ್ರಶಸ್ತಿ ಜಯಿಸಿದೆ.
A football tournament without hooligans. And being at last years Wembley disgrace & now in Qatar, Qatar is the standout!
— Kevin Pietersen (@KP24) December 19, 2022
Maybe EVERY football tournament can be in the Middle East so our fan experience can be memorable! pic.twitter.com/jr2igYVijw