18 ವರ್ಷದ ಖ್ಯಾತ MMA ಸ್ಟಾರ್ ವಿಕ್ಟೋರಿಯಾ ಲೀ ನಿಧನ
ಹೊಸದಿಲ್ಲಿ: ಹದಿನೆಂಟು ವರ್ಷದ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (MMA) ತಾರೆ ವಿಕ್ಟೋರಿಯಾ ಲೀ (Victoria Lee) ಅವರು ನಿದನರಾಗಿದ್ದಾರೆಂದು ಆಕೆಯ ಸೋದರಿ ಇನ್ಸ್ಟಾಗ್ರಾಂನಲ್ಲಿ ದುಃಖಕರ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರತಿಭಾನ್ವಿತ ಮಾರ್ಷಲ್ ಕಲಾವಿದೆಯಾಗಿದ್ದ ಲೀ ಎಂಎಂಎ ಮತ್ತು ಯುಎಫ್ಸಿ (UFC) ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸಿದ್ದರು.
ಕಿಕ್ಬಾಕ್ಸಿಂಗ್ ಮತ್ತು ಟಾಕ್ವೆಂಡೊ ಹಿನ್ನೆಲೆಯ ವಿಕ್ಟೋರಿಯಾ ಲೀ ತಮ್ಮ ಅಪ್ರತಿಮ ಎಂಎಂಎ ಪ್ರತಿಭೆಗೆ ಹೆಸರು ಪಡೆದಿದ್ದರು. 16 ವರ್ಷದವಳಿರುವಾಗಲೇ ಟಾಕ್ವೆಂಡೋದಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದ ಆಕೆ ನಂತರ ಕಿಕ್ಬಾಕ್ಸಿಂಗ್ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದರಲ್ಲದೆ ಹಲವಾರು ಸ್ಪರ್ಧೆಗಳಲ್ಲಿ ಗೆದ್ದಿದ್ದರು.
2017 ರಲ್ಲಿ ಎಂಎಂಎ ಯತ್ತ ಗಮನ ಹರಿಸಿದ್ದ ಆಕೆ ಯುಎಫ್ಸಿ ಜೊತೆ ಸೇರಿಕೊಂಡು ಹಲವಾರು ಹೈಪ್ರೊಫೈಲ್ ಪಂದ್ಯಗಳಲ್ಲಿ ಆಡಿದ್ದರು. ತಮ್ಮ ಸ್ಟ್ರೈಕಿಂಗ್ ಸಾಮರ್ಥ್ಯಕ್ಕೆ ಹೆಸರು ಪಡೆದಿದ್ದ ಆಕೆ ತಮ್ಮ ವೃತ್ತಿಯಲ್ಲಿ ಹಲವಾರು ನಾಕೌಟ್ ಗಳಿಸಿದ್ದರು.
ಜಿಮ್ನಲ್ಲಿ ಸಾಕಷ್ಟು ಸಮಯವನ್ನು ಆಕೆ ಕಳೆಯುತ್ತಿದ್ದರು. ಫೈಟರ್ ವೃತ್ತಿಯ ಹೊರತಾಗಿ ಆಕೆ ವಿಕ್ಟೋರಿಯಾಸ್ ಸೀಕ್ರೆಟ್ ಸಹಿತ ಹಲವು ಉನ್ನತ ಬ್ರ್ಯಾಂಡ್ಗಳಿಗೆ ರೂಪದರ್ಶಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಆಕೆಗೆ ಸಾವಿರಾರು ಫಾಲೋವರ್ಸ್ ಇದ್ದಾರೆ.
ಆಕೆಯ ಸಾವಿಗೆ ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ.
ಇದನ್ನೂ ಓದಿ: ಕಾನ್ಪುರ: ಒಂದೇ ವಾರದ ಅವಧಿಯಲ್ಲಿ ಹೃದಯಾಘಾತದಿಂದ 98 ಮಂದಿ ಸಾವು