ತಾಳ್ಮೆ ಕಳೆದುಕೊಂಡು ಅಭಿಮಾನಿಗೆ ಕ್ಯಾಪ್ ನಿಂದ ಹೊಡೆದ ಶಾಕಿಬ್ ಅಲ್ ಹಸನ್: ವೀಡಿಯೊ ವೈರಲ್
ಢಾಕಾ: ನಿಸ್ಸಂದೇಹವಾಗಿ ಶಾಕಿಬ್ ಅಲ್ ಹಸನ್,ಬಾಂಗ್ಲಾದೇಶ ಕಂಡ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರು, ಆದರೆ, ಅವರ ವರ್ತನೆಯೇ ಆಗಾಗ್ಗೆ ಅವರನ್ನು ಸಮಸ್ಯೆಗೆ ಸಿಲುಕಿಸುತ್ತದೆ. ಕೆಲವೊಮ್ಮೆ, ಶಾಕಿಬ್ ಕ್ರಿಕೆಟ್ ಮೈದಾನದಲ್ಲಿ ತನ್ನ ತಾಳ್ಮೆಯನ್ನು ಕಳೆದುಕೊಂಡು ಅಂಪೈರ್ ಮೇಲೆ ರೇಗಾಡುತ್ತಾರೆ, ಕೆಲವೊಮ್ಮೆ ವೈಯಕ್ತಿಕ ವಿಚಾರದಲ್ಲೂ ತಾಳ್ಮೆ ಕಳೆದುಕೊಳ್ಳುತ್ತಾರೆ.
ಚಟ್ಟೊಗ್ರಾಮ್ ನಲ್ಲಿ ಪ್ರಚಾರ ಕಾರ್ಯಕ್ರಮಕ್ಕೆ ಬಿಗಿ ಭದ್ರತೆಯ ನಡುವೆ ಸಾಗುತ್ತಿದ್ದ ಶಾಕಿಬ್ ರನ್ನು ನೂರಾರು ಅಭಿಮಾನಿಗಳು ಸುತ್ತುವರಿದು ಸೆಲ್ಫಿ ತೆಗೆದುಕೊಳ್ಳಲು ಮುಗ್ಗಿಬಿದ್ದರು. ಆಗ ತಾಳ್ಮೆ ಕಳೆದುಕೊಂಡ ಶಾಕಿಬ್, ಕ್ಯಾಪ್ ನಿಂದ ಅಭಿಮಾನಿಯೊಬ್ಬನಿಗೆ ಜೋರಾಗಿ ಹೊಡೆದಿದ್ದಾರೆ. ಈ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಖಂಡನೆ ವ್ಯಕ್ತವಾಗಿದೆ.
ವಿಶೇಷವಾಗಿ ಬಾಂಗ್ಲಾದೇಶ ಕ್ರಿಕೆಟ್ನಲ್ಲಿ ಶಾಕಿಬ್ ವಿವಾದದಿಂದ ಹೆಚ್ಚು ಸುದ್ದಿಯಾಗುತ್ತಿರುವ ಆಟಗಾರ. ಮೈದಾನದಲ್ಲಿನ ತನ್ನ ವರ್ತನೆಗಳಿಂದಾಗಿ ಅನೇಕ ಸಂದರ್ಭಗಳಲ್ಲಿ ಸುದ್ದಿಯಾಗಿದ್ದಾರೆ. ಈ ಹೊಸ ಘಟನೆಯೂ ಇದಕ್ಕಿಂತ ಭಿನ್ನವಾಗಿಲ್ಲ.
ಸದ್ಯ ಶಾಕಿಬ್ ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಬಾಂಗ್ಲಾದೇಶವನ್ನು ಮುನ್ನಡೆಸುವಲ್ಲಿ ನಿರತರಾಗಿದ್ದಾರೆ. ಶಾಕಿಬ್ ನಾಯಕತ್ವದಲ್ಲಿ ಗುರುವಾರ ನಡೆದ 3 ಪಂದ್ಯಗಳ ಸರಣಿಯ ಮೊದಲ ಟಿ-20ಯಲ್ಲಿ ಬಾಂಗ್ಲಾದೇಶ ತಂಡ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಸೋಲಿಸಿತ್ತು.
#ShakibAlHasan
— shahinur (@shahinu_r) March 10, 2023
One of the most popular cricketers of #Bangladesh.
After leaving the field with #England yesterday, a fan attempted to hit him with a cap for taking a selfie.#BANvENG #Dhaka #Cricket pic.twitter.com/sS0AG9TwRQ