ಐಪಿಎಲ್: ಲಕ್ನೊ ಸೂಪರ್ ಜೈಂಟ್ಸ್ 193/6
ಕೈಲ್ ಮೇಯರ್ಸ್ ಅಬ್ಬರದ ಬ್ಯಾಟಿಂಗ್
ಲಕ್ನೊ, ಎ.1: ಆರಂಭಿಕ ಬ್ಯಾಟರ್ ಕೈಲ್ ಮೇಯರ್ಸ್ ಅಬ್ಬರದ ಬ್ಯಾಟಿಂಗ್(73 ರನ್, 38 ಎಸೆತ, 2 ಬೌಂಡರಿ, 7 ಸಿಕ್ಸರ್)ಸಹಾಯದಿಂದ ಲಕ್ನೊ ಸೂಪರ್ ಜೈಂಟ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐಪಿಎಲ್ನ 3ನೇ ಪಂದ್ಯದಲ್ಲಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 193 ರನ್ ಗಳಿಸಿದೆ.
ಶನಿವಾರ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೊ ತಂಡ ನಾಯಕ ಕೆ.ಎಲ್.ರಾಹುಲ್(8 ರನ್)ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆಗ ಜೊತೆಗೂಡಿದ ಮೇಯರ್ಸ್ ಹಾಗೂ ದೀಪಕ್ ಹೂಡಾ(17 ರನ್,18 ಎಸೆತ) 2ನೇ ವಿಕೆಟ್ಗೆ 79 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ಕೃನಾಲ್ ಪಾಂಡ್ಯ (ಔಟಾಗದೆ 15, 13 ಎಸೆತ)ಹಾಗೂ ನಿಕೊಲಸ್ ಪೂರನ್(36 ರನ್, 21 ಎಸೆತ) 5ನೇ ವಿಕೆಟ್ಗೆ 48 ರನ್ ಜೊತೆಯಾಟ ನಡೆಸಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ಪೂರನ್ ಔಟಾದ ನಂತರ ಪಾಂಡ್ಯ ಅವರು ಆಯುಷ್ ಬದೋನಿ(18 ರನ್, 7 ಎಸೆತ) ಜೊತೆ 6ನೇ ವಿಕೆಟಿಗೆ 22 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 193ಕ್ಕೆ ತಲುಪಿಸಿದರು.
ಡೆಲ್ಲಿ ಬೌಲಿಂಗ್ ವಿಭಾಗದಲ್ಲಿ ಖಲೀಲ್ ಅಹ್ಮದ್(2-30) ಹಾಗೂ ಚೇತನ್ ಸಕಾರಿಯ(2-53) ತಲಾ ಎರಡು ವಿಕೆಟ್ ಪಡೆದರು.