ಐಪಿಎಲ್ ಟೂರ್ನಿಯಿಂದ ಹೊರಗುಳಿದ ಗುಜರಾತ್ ಟೈಟಾನ್ಸ್ ಬ್ಯಾಟರ್ ಕೇನ್ ವಿಲಿಯಮ್ಸನ್
ಹೊಸದಿಲ್ಲಿ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧದ ಶುಕ್ರವಾರ ನಡೆದ ಆರಂಭಿಕ ಪಂದ್ಯದಲ್ಲಿ ಮೊಣಕಾಲಿನ ಗಾಯಕ್ಕೆ ಒಳಗಾಗಿರುವ ಕೇನ್ ವಿಲಿಯಮ್ಸನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರಿಂದ ಹೊರಗುಳಿದಿದ್ದಾರೆ ಎಂದು ಗುಜರಾತ್ ಟೈಟಾನ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಿಎಸ್ಕೆ ವಿರುದ್ಧ ಗುಜರಾತ್ ಟೈಟಾನ್ಸ್ನ ಆರಂಭಿಕ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ವಿಲಿಯಮ್ಸನ್ ಅವರ ಬಲ ಮೊಣಕಾಲಿಗೆ ಗಾಯವಾಗಿತ್ತು.
ಪಂದ್ಯಾವಳಿಯ ಆರಂಭದಲ್ಲಿ ಕೇನ್ ಗಾಯದಿಂದ ಹೊರಗುಳಿದಿರುವುದು ಬೇಸರದ ವಿಚಾರ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಹಾರೈಸುತ್ತೇವೆ ಎಂದು ವಿಕ್ರಮ್ ಸೋಲಂಕಿ ಹೇಳಿದರು.
32 ವರ್ಷದ ವಿಲಿಯಮ್ಸನ್ ಶುಕ್ರವಾರ ಚೆನ್ನೈ ಇನ್ನಿಂಗ್ಸ್ನಲ್ಲಿ ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡರು. 13ನೇ ಓವರ್ನಲ್ಲಿ ಅವರು ಮೈದಾನದಿಂದ ಹೊರ ನಡೆದಿದ್ದರು.
ಗುಜರಾತ್ ಟೈಟಾನ್ಸ್ಗೆ ಪಾದಾರ್ಪಣೆ ಮಾಡುತ್ತಿದ್ದ ವಿಲಿಯಮ್ಸನ್, ಸಿಎಸ್ಕೆ ಓಪನರ್ ಋತುರಾಜ್ ಬ್ಯಾಟಿಂಗ್ ನಲ್ಲಿ ಸಂಭವನೀಯ ಸಿಕ್ಸರ್ ತಡೆಯುವ ಯತ್ನದಲ್ಲಿದ್ದಾಗ ಗಾಯಗೊಂಡಿದ್ದರು.
We regret to announce, Kane Williamson has been ruled out of the TATA IPL 2023, after sustaining an injury in the season opener against Chennai Super Kings.
— Gujarat Titans (@gujarat_titans) April 2, 2023
We wish our Titan a speedy recovery and hope for his early return. pic.twitter.com/SVLu73SNpl