ದ್ವಿತೀಯ ಟೆಸ್ಟ್ : ಭಾರತ ಮೊದಲ ಇನಿಂಗ್ಸ್ ನಲ್ಲಿ 415/7
ವಿಶಾಖಪಟ್ಟಣ, ನ.18:ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ದದ ಎರಡನೆ ಕ್ರಿಕೆಟ್ ಟೆಸ್ಟ್ ನ ಎರಡನೆ ದಿನವಾಗಿರುವ ಇಂದು ಲಂಚ್ ವಿರಾಮದ ವೇಳೆಗೆ ಭಾರತ ಮೊದಲ ಇನಿಂಗ್ಸ್ ನಲ್ಲಿ 119 ಓವರ್ ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 415 ರನ್ ಗಳಿಸಿದೆ.
ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ 47 ರನ್ ಮತ್ತು ಚೊಚ್ಚಲ ಟೆಸ್ಟ್ ಆಡುತ್ತಿರುವ ದಿಲ್ಲಿಯ ಬೌಲರ್ ಜಯಂತ್ 26 ರನ್ ಗಳಿಸಿ ಔಟಾಗದೆ ಕ್ರೀಸ್ ನಲ್ಲಿ ಆಡುತ್ತಿದ್ದಾರೆ.
ಇಂಗ್ಲೆಂಡ್ ನ ಮೊಯಿನ್ ಅಲಿ ದಾಳಿಗೆ ಸಿಲುಕಿದ ಭಾರತದ ದಾಂಡಿಗರು ಬೇಗನೆ ವಿಕೆಟ್ ಗಳನ್ನು ಕೈ ಚೆಲ್ಲಿದ್ದರು. ಮೊದಲ ದಿನದಾಟದಂತ್ಯಕ್ಕೆ 151 ರನ್ ಗಳಿಸಿದ್ದ ವಿರಾಟ್ ಕೊಹ್ಲಿ(167) ಈ ಮೊತ್ತಕ್ಕೆ 16 ರನ್ ಸೇರಿಸಿ ಔಟಾಗಿದ್ದಾರೆ. ಸಹಾ (3) ಮತ್ತು ರವೀಂದ್ರ ಜಡೇಜ (0) ಅವರಿಗೆ ಅಲಿ ಬೇಗನೆ ಪೆವಿಲಿಯನ್ ಹಾದಿ ತೋರಿಸಿದರು.
Next Story