300 ಮಿಲಿಯನ್ ಯುರೋ ಆಫರ್ ತಿರಸ್ಕರಿಸಿದ ರೊನಾಲ್ಡೊ !
ಮ್ಯಾಡ್ರಿಡ್, ಡಿ.30: ‘ವಿಶ್ವದ ವರ್ಷದ ಆಟಗಾರ’ ಕ್ರಿಸ್ಟಿಯಾನೊ ರೊನಾಲ್ಡೊ ಚೀನಾದ ಹೆಸರು ಬಹಿರಂಗಪಡಿಸದ ಫುಟ್ಬಾಲ್ ಲೀಗ್ ಕ್ಲಬ್ವೊಂದು ನೀಡಿದ 300 ಮಿಲಿಯನ್ ಯುರೋಸ್(315.24 ಮಿಲಿಯನ್ ಡಾಲರ್) ವರ್ಗಾವಣೆ ಶುಲ್ಕದ ಆಫರ್ನ್ನು ತಿರಸ್ಕರಿಸಿದ್ದಾರೆ. ಅವರು ರಿಯಲ್ ಮ್ಯಾಡ್ರಿಡ್ ಕ್ಲಬ್ನಲ್ಲೇ ಮುಂದುವರಿಯಲು ನಿರ್ಧರಿಸಿದ್ದಾರೆ.
‘‘ಚೀನಾದ ಹೆಸರು ಬಹಿರಂಗಪಡಿಸಿದ ಫುಟ್ಬಾಲ್ ಕ್ಲಬ್ವೊಂದು ಪೋರ್ಚುಗಲ್ನ ಸ್ಟ್ರೈಕರ್ ರೊನಾಲ್ಡೊಗೆ ಪ್ರತಿವರ್ಷ 100 ಮಿಲಿಯನ್ ಯುರೋಸ್ಗೂ ಅಧಿಕ ಒಪ್ಪಂದದ ಆಫರ್ನ್ನು ಮುಂದಿಟ್ಟಿತ್ತು. ರಿಯಲ್ ಮ್ಯಾಡ್ರಿಡ್ ಕ್ಲಬ್ಗೆ 300 ಮಿಲಿಯನ್ ಯುರೋ ವರ್ಗಾವಣೆಯ ಶುಲ್ಕದ ಆಫರ್ನ್ನೂ ನೀಡಿತ್ತು’’ ಎಂದು ರೊನಾಲ್ಡೊರ ಏಜೆಂಟ್ ಜಾರ್ಜ್ ಮೆಂಡಿಸ್ ದುಬೈನಲ್ಲಿ ನಡೆದ ಗ್ಲೋಬಲ್ ಸಾಕರ್ ಅವಾರ್ಡ್ಸ್ ಕಾರ್ಯಕ್ರಮದ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘‘ರೊನಾಲ್ಡೊಗೆ ಹಣವೊಂದೇ ಮುಖ್ಯವಲ್ಲ. ರಿಯಲ್ ಮ್ಯಾಡ್ರಿಡ್ ಕ್ಲಬ್ ಎಂದರೆ ಅವರಿಗೆ ಪಂಚಪ್ರಾಣ. ರಿಯಲ್ ಮ್ಯಾಡ್ರಿಡ್ನೊಂದಿಗೆ ರೊನಾಲ್ಡೊ ಸಂತೋಷದಲ್ಲಿದ್ದಾರೆ. ಅವರು ಚೀನಾಕ್ಕೆ ಹೋಗುವ ಸಾಧ್ಯತೆ ಇಲ್ಲವೇ ಇಲ್ಲ. ಚೀನಾದ ಮಾರುಕಟ್ಟೆ ತೀರಾ ಹೊಸದು. ಚೀನಾದ ಫುಟ್ಬಾಲ್ ಕ್ಲಬ್ ಹಲವಾರು ಆಟಗಾರರೊಂದಿಗೆ ಒಪ್ಪಂದ ಮಾಡಿಕೊಂಡಿದೆ’’ ಎಂದು ಮೆಂಡಿಸ್ ಹೇಳಿದ್ದಾರೆ.
ಅರ್ಜೆಂಟೀನದ ಸ್ಟ್ರೈಕರ್ ಕಾರ್ಲೊಸ್ ಟೆವೆಝ್ ಚೀನಾದ ಸೂಪರ್ ಲೀಗ್ನ ಫುಟ್ಬಾಲ್ ತಂಡ ಶಾಂೈಗೆ ಸೇರ್ಪಡೆಯಾದ ದಿನದಂದೇ ಯುರೋಪಿಯನ್ ಚಾಂಪಿಯನ್ ರಿಯಲ್ಗೆ ಈ ಆಫರ್ನ್ನು ನೀಡಿರುವ ಸುದ್ದಿ ಬಂದಿದೆ.
ಟೆವೆಝ್ ಎಷ್ಟು ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆಂದು ಬಹಿರಂಗವಾಗಿಲ್ಲ.ಮಾಧ್ಯಮದ ವರದಿಯ ಪ್ರಕಾರ ಶಾಂೈ ಕ್ಲಬ್ ಮ್ಯಾಂಚೆಸ್ಟರ್ ಸಿಟಿ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್ನ ಮಾಜಿ ಫಾರ್ವರ್ಡ್ ಆಟಗಾರನಿಗೆ 84 ಮಿಲಿಯನ್ ಯುರೋಸ್ ನೀಡಿದೆ.