ವೀಕ್ಷಕ ವಿವರಣೆ ನೀಡಿದ ಕುಂಬ್ಳೆ , ಮಾಂಜ್ರೆಕರ್ ಜೇಬಿಗಿಳಿಸಿದ್ದು ಎಷ್ಟು ?
ಹೊಸದಿಲ್ಲಿ , ಫೆ . 9: ಕಳೆದ ಅಕ್ಟೋಬರ್ ಹಾಗು ಡಿಸೆಂಬರ್ ನಲ್ಲಿ ಭಾರತದಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಸರಣಿಯ ವೀಕ್ಷಕ ವಿವರಣೆ ಮಾಡಿದ ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಹಾಗು ಮಾಜಿ ಆಟಗಾರ ಸಂಜಯ್ ಮಾಂಜ್ರೆಕರ್ ಅವರಿಗೆ ಬಿಸಿಸಿಐ ನೀಡಿದ ಸಂಭಾವನೆ ಕೇವಲ ಕ್ರಮವಾಗಿ 39 ಲಕ್ಷ ರೂ ಹಾಗು 36 ಲಕ್ಷ ರೂ. !
ಕಳೆದ ಜನವರಿಯಲ್ಲಿ ಬಿಸಿಸಿಐ ಮಾಡಿದ ಪಾವತಿಗಳ ಪಟ್ಟಿಯಲ್ಲಿ ಈ ವಿವರವನ್ನು ನೀಡಲಾಗಿದೆ.
ಮಾಂಜ್ರೆಕರ್ ಅವರಿಗೆ ದಕ್ಷಿಣ ಆಫ್ರಿಕ ಟೆಸ್ಟ್ ಸರಣಿಯ ವೀಕ್ಷಕ ವಿವರಣೆಗಾಗಿ ರೂ.36,49,375 ಹಾಗು ಕುಂಬ್ಳೆಗೆ ಏಕ ದಿನ ಹಾಗು ಟೆಸ್ಟ್ ಸರಣಿಯ ಬಗ್ಗೆ ಅಭಿಪ್ರಾಯ ಹಂಚಿಕೊಂಡದಕ್ಕೆ ರೂ.39,10,500 ನೀಡಲಾಗಿದೆ ಎಂದು ವಿವರ ನೀಡಲಾಗಿದೆ.
Next Story