ಏಷ್ಯಾ ಕಪ್: ಶಮಿ ಹೊರಕ್ಕೆ; ಭುವಿಗೆ ಸ್ಥಾನ
ಹೊಸದಿಲ್ಲಿ, ಫೆ.19: ಮುಂಬರುವ ಏಷ್ಯಾ ಕಪ್ಗೆ ವೇಗದ ಬೌಲರ್ ಮುಹಮ್ಮದ್ ಶಮಿ ಇನ್ನೂ ಫಿಟ್ನೆಸ್ ಸಮಸ್ಯೆಯಿಂದ ಹೊರಬಾರದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಸೇವೆಗೆ ಅಲಭ್ಯರಾಗಿದ್ದಾರೆ.
ಭುವನೇಶ್ವರ್ಕುಮಾರ್ ಅವರು ಶಮಿ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮುಂಬರುವ ಟ್ವೆಂಟಿ-20 ವಿಶ್ವಕಪ್ಗೆ ತಂಡಕ್ಕೆ ವಾಪಸಾಗುವುದನ್ನು ನಿರೀಕ್ಷಿಸಲಾಗಿದೆ. ಕೆಲವು ದಿನಗಳ ಹಿಂದೆ ಶಮಿ ತಂಡದ ಸೇವೆಗೆ ಫಿಟ್ ಆಗಿರುವುದಾಗಿ ಹೇಳಿದ್ದರು.
ಬಿಸಿಸಿಐ ಇಂದು ಶಮಿ ಏಷ್ಯಕಪ್ಗೆ ತಂಡದ ಸೇವೆಗೆ ಇಲ್ಲ ಎಂದು ಹೇಳಿದ್ದು, ಭುವನೇಶ್ವರ್ ಕುಮಾರ್ ಅವರನ್ನು ಅವರ ಬದಲಿಗೆ ತಂಡದಲ್ಲಿ ಸೇರಿಸಿಕೊಂಡಿದೆ.
Next Story