ವಿರಾಟ್ ಕೊಹ್ಲಿ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್: ಆಮಿರ್
ಹೊಸದಿಲ್ಲಿ, ಜು.18: ಪ್ರಸ್ತುತ ಕಾಲಘಟ್ಟದಲ್ಲಿ ಇಡೀ ಕ್ರಿಕೆಟ್ ಸಮುದಾಯ ಶ್ರೇಷ್ಠ ಬ್ಯಾಟ್ಸ್ಮನ್ ಯಾರೆಂದು ಗುರುತಿಸಲು ಕಷ್ಟಪಡುತ್ತಿದೆ. ಹೀಗಿರುವಾಗ ಪಾಕಿಸ್ತಾನದ ಎಡಗೈ ವೇಗದ ಬೌಲರ್ ಮುಹಮ್ಮದ್ ಆಮಿರ್ ಭಾರತದ ನಾಯಕ ವಿರಾಟ್ ಕೊಹ್ಲಿಯವರೇ ವಿಶ್ವ ಶ್ರೇಷ್ಠ ಬ್ಯಾಟ್ಸ್ ಮನ್ ಎಂದು ಸರ್ಟಿಫಿಕೇಟ್ ನೀಡಿದ್ದಾರೆ. ಆಮಿರ್ ತನ್ನ ಟ್ವಿಟರ್ ಖಾತೆಯಲ್ಲಿ ಇತ್ತೀಚೆಗೆ ಚಾಟ್ ಸೆಶನ್ ಏರ್ಪಡಿಸಿದ್ದರು. ಈ ವೇಳೆ ಅವರಲ್ಲಿ ನಿಮ್ಮ ಪ್ರಕಾರ ಶ್ರೇಷ್ಠ ಬ್ಯಾಟ್ಸ್ಮನ್ ಯಾರೆಂದು ಕೇಳಲಾಯಿತು. ಆಗ ಅವರ ವಿರಾಟ್ ಕೊಹ್ಲಿ ಎಂದು ಉತ್ತರಿಸಿದರು.
Next Story