ಮಹಿಳೆಯರ 1,500 ಮೀ. ಓಟ: ಕಿಪಿಗನ್ ಚಾಂಪಿಯನ್
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್
ಲಂಡನ್, ಆ.8: ಒಲಿಂಪಿಕ್ಸ್ ಚಾಂಪಿಯನ್ ಕೀನ್ಯದ ಫೈತ್ ಕಿಪಿಗನ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಮಹಿಳೆಯರ 1,500 ಮೀ. ಓಟದಲ್ಲಿ ಚಾಂಪಿಯನ್ ಆಗಿದ್ದಾರೆ. ಈ ಮೂಲಕ ತನ್ನ ಮುಡಿಗೆ ಮತ್ತೊಂದು ವಿಶ್ವ ಕಿರೀಟವನ್ನು ಸೇರ್ಪಡೆಗೊಳಿಸಿದ್ದಾರೆ.
ಸೋಮವಾರ ನಡೆದ ಫೈನಲ್ನಲ್ಲಿ ಕಿಪಿಗನ್ 4 ನಿಮಿಷ 2.59 ಸೆಕೆಂಡ್ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರೆ, ಅಮೆರಿಕದ ಜೆನ್ನಿಫೆರ್ ಸಿಂಪ್ಸನ್(4:02.76 ಸೆ.) ಬೆಳ್ಳಿ ಹಾಗೂ ದಕ್ಷಿಣ ಆಫ್ರಿಕದ 800 ಮೀ. ಸ್ಪೆಷಲಿಸ್ಟ್ ಕಾಸ್ಟರ್ ಸೆಮೆನ್ಯಾ(4:02.90 ಸೆ.) ಕಂಚು ಜಯಿಸಿದ್ದಾರೆ.ಹಾಲಿ ವಿಶ್ವ ಚಾಂಪಿಯನ್ ಡಿಬಾಬಾ 12ನೆ ಸ್ಥಾನ ಪಡೆದಿದ್ದಾರೆ.
‘‘ಇಂತಹ ಉತ್ತಮ ಫೀಲ್ಡ್ ನಲ್ಲಿ ವೇಗವಾಗಿ ಓಡಬಲ್ಲೆನೆಂಬ ವಿಶ್ವಾಸವಿತ್ತು. ಇಲ್ಲಿ ಚಿನ್ನ ಜಯಿಸಿರುವುದಕ್ಕೆ ಸಂತೋಷವಾಗುತ್ತಿದೆ. ನನ್ನ ಕುಟುಂಬ ಸದಸ್ಯರೊಂದಿಗೆ ಗೆಲುವಿನ ಸಂಭ್ರಮ ಆಚರಿಸಿಕೊಳ್ಳಲು ಬಯಸುವೆ’’ ಎಂದು ಕಿಪಿಗನ್ ಹೇಳಿದ್ದಾರೆ.
Next Story