ಯುಎಸ್ ಓಪನ್ನಿಂದ ಆ್ಯಂಡಿ ಮರ್ರೆ ಹೊರಕ್ಕೆ
ನ್ಯೂಯಾರ್ಕ್, ಆ.27: ವಿಶ್ವದ ನಂ.2 ಆಟಗಾರ ಆ್ಯಂಡಿ ಮರ್ರೆ ಅವರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಮುಂಬರುವ ಯುಎಸ್ ಓಪನ್ನಿಂದ ದೂರ ಉಳಿಯಲಿದ್ದಾರೆ.
ಗಾಯದ ಕಾರಣ ದಿಂದಾಗಿ ಈ ವರ್ಷದ ಕೊನೆಯ ಗ್ರಾನ್ ಸ್ಲಾಮ್ ಸ್ಪರ್ಧೆಯಾಗಿರುವ ಯುಎಸ್ ಓಪನ್ನಲ್ಲಿ ಭಾಗವಹಿಸುವ ನಿರ್ಧಾರದಿಂದ ಹಿಂದಕ್ಕೆ ಸರಿದಿರುವುದಾಗಿ ಶನಿವಾರ ತಿಳಿಸಿದ್ದಾರೆ.
ಮೂರು ಬಾರಿ ಗ್ರಾನ್ ಸ್ಲಾಮ್ ಜಯಿಸಿರುವ ಮರ್ರೆ 2012ಲ್ಲಿ ಮೊದಲ ಬಾರಿ ಪ್ರಮುಖ ಪ್ರಶಸ್ತಿ ಜಯಿಸಿದ್ದರು.
30ರ ಹರೆಯದ ಸ್ಕಾಟ್ಲೆಂಡ್ನ ಮರ್ರೆ ಕಳೆದ ತಿಂಗಳು ವಿಂಬಲ್ಡನ್ನಲ್ಲಿ ಕ್ವಾರ್ಟರ್ ಫೈನಲ್ನಲ್ಲಿ ಸೋತು ನಿರ್ಗಮಿಸಿದ್ದರು. ಫ್ರೆಂಚ್ ಓಪನ್ನಲ್ಲಿ ಸ್ವಿಸ್ನ ಸ್ಟಾನ್ ವಾವ್ರಿಂಕಾ ವಿರುದ್ಧ ಸೋಲು ಅನುಭವಿಸಿದ್ದರು.
ಗಾಯದ ಕಾರ ಣದಿಂದಾಗಿ ಮರ್ರೆ ಯುಎಸ್ ಓಪನ್ನಲ್ಲಿ ಆಡುವುದರಿಂದ ಹಿಂದಕ್ಕೆ ಸರಿದ 5ನೆ ಆಟಗಾರ. ಸ್ವಿಸ್ನ ಸ್ಟಾನ್ ವಾವ್ರಿಂಕಾ, ಮಾಜಿ ನಂ. 1 ಸರ್ಬಿಯಾದ ನೊವಾಕ್ ಜೊಕೊವಿಕ್, ಜಪಾನ್ನ ಮಾಜಿ ರನ್ನರ್ ಅಪ್ ಕೀ ನಿಶಿಕೋರಿ, ಕೆನಡಾದ ಮಿಲಾಸ್ ರಾವೊನಿಕ್ ಅವರು ಯುಎಸ್ ಓಪನ್ನಿಂದ ದೂರ ಸರಿದಿದ್ದಾರೆ.