ನಾಲ್ಕನೆ ಏಕದಿನ: ಶ್ರೀಲಂಕಾ ವಿರುದ್ಧ ಭಾರತ 375/5
ಕೊಹ್ಲಿ-ರೋಹಿತ್ ಶರ್ಮ ಶತಕ
ಕೊಲಂಬೊ, ಆ.31: ನಾಯಕ ವಿರಾಟ್ ಕೊಹ್ಲಿ ಹಾಗೂ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮ ಸಿಡಿಸಿದ ಆಕರ್ಷಕ ಶತಕದ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧದ ನಾಲ್ಕನೆ ಏಕದಿನ ಪಂದ್ಯದಲ್ಲಿ 5 ವಿಕೆಟ್ ನಷ್ಟಕ್ಕೆ 375 ರನ್ ಗಳಿಸಿದೆ.
ಇಲ್ಲಿನ ಪ್ರೇಮದಾಸ ಸ್ಟೇಡಿಯಂನಲ್ಲಿ ಗುರುವಾರ ಟಾಸ್ ಜಯಿಸಿದ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಇನಿಂಗ್ಸ್ನ 2ನೆ ಓವರ್ನಲ್ಲಿ ಶಿಖರ್ ಧವನ್(6) ಔಟಾದರು. ಆಗ 2ನೆ ವಿಕೆಟ್ಗೆ ದ್ವಿಶತಕದ ಜೊತೆಯಾಟ(219) ನಡೆಸಿದ ರೋಹಿತ್ ಶರ್ಮ(104, 88 ಎಸೆತ, 11 ಬೌಂಡರಿ, 3 ಸಿಕ್ಸರ್) ಹಾಗೂ ಕೊಹ್ಲಿ(131, 96 ಎಸೆತ) ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು.
ಭಾರತ 274 ರನ್ಗೆ 5 ವಿಕೆಟ್ ಕಳೆದುಕೊಂಡಿತು. ಆಗ 6ನೆ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 101 ರನ್ ಜೊತೆಯಾಟ ನಡೆಸಿದ ಕನ್ನಡಿಗ ಮನೀಷ್ ಪಾಂಡೆ(ಅಜೇಯ 50) ಹಾಗೂ ಮಾಜಿ ನಾಯಕ ಎಂಎಸ್ ಧೋನಿ(ಅಜೇಯ 49) ತಂಡ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 375 ರನ್ ಗಳಿಸಲು ನೆರವಾದರು. ಶ್ರೀಲಂಕಾದ ಪರ ಮ್ಯಾಥ್ಯೂಸ್(2-24) ಯಶಸ್ವಿ ಬೌಲರ್ ಎನಿಸಿಕೊಂಡರು.