ಸಾನಿಯಾ-ಬೋಪಣ್ಣ ಕ್ವಾರ್ಟರ್ ಫೈನಲ್ಗೆ
ನ್ಯೂಯಾರ್ಕ್, ಸೆ.4: ಸಾನಿಯಾ ಮಿರ್ಝಾ ಹಾಗೂ ರೋಹನ್ ಬೋಪಣ್ಣ ಯುಎಸ್ ಓಪನ್ನಲ್ಲಿ ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ. ಆದರೆ, ಲಿಯಾಂಡರ್ ಪೇಸ್ ಹಾಗೂ ಪೂರವ್ ರಾಜಾ ಮುಗ್ಗರಿಸಿದ್ದಾರೆ.
ಮಹಿಳೆಯರ ಡಬಲ್ಸ್ನ ಮೂರನೆ ಸುತ್ತಿನ ಪಂದ್ಯದಲ್ಲಿ 4ನೆ ಶ್ರೇಯಾಂಕದ ಇಂಡೋ-ಚೀನಾ ಜೋಡಿ ಸಾನಿಯಾ ಮಿರ್ಝಾ ಹಾಗೂ ಶುಯಿ ಪೆಂಗ್ ಅವರು ರೊಮಾನಿಯ-ಸ್ಪೇನ್ ಜೋಡಿ ಸೊರಾನಾ ಸಿರ್ಸ್ಟಿ ಹಾಗೂ ಸಾರಾ ಸೊರಿಬೆಸ್ ಟೊರ್ಮೊರನ್ನು 6-2, 3-6, 7-6(2) ಸೆಟ್ಗಳಿಂದ ಮಣಿಸಿದರು. ಮಿಶ್ರ ಡಬಲ್ಸ್ ನಲ್ಲಿ ಬೋಪಣ್ಣ ಹಾಗೂ ಅವರ ಕೆನಡಾದ ಜೊತೆಗಾರ್ತಿ ಗ್ಯಾಬ್ರಿಯೆಲಾ ಡಾಬ್ರೊಸ್ಕಿ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಅಮೆರಿಕ-ಸ್ಪೇನ್ ಜೋಡಿ ಮರಿಯಾ ಜೋಸ್ ಹಾಗೂ ನಿಕೊಲಸ್ ಮೊನ್ರೊರನ್ನು 6-3, 6-4 ನೇರ ಸೆಟ್ಗಳಿಂದ ಮಣಿಸಿದ್ದಾರೆ. ಪುರುಷರ ಡಬಲ್ಸ್ ನ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಪೇಸ್ ಹಾಗೂ ರಾಜಾ ರಶ್ಯದ ಜೋಡಿ ಕರೆನ್ ಖಚನೊವ್ ಹಾಗೂ ಆ್ಯಂಡ್ರೆ ರುಬ್ಲೆವ್ ವಿರುದ್ದ 4-6, 6-7(7) ಸೆಟ್ಗಳಿಂದ ಸೋತಿದ್ದಾರೆ.
Next Story