Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲೇಖನಗಳು
  4. ನನ್ನೊಳಗಿನ ನಾನು : ಬಿ.ಎ. ಮೊಹಿದೀನ್

ನನ್ನೊಳಗಿನ ನಾನು : ಬಿ.ಎ. ಮೊಹಿದೀನ್

ಹಿರಿಯ ರಾಜಕಾರಣಿ ಬಿ.ಎ.ಮೊಹಿದೀನ್ ನಮ್ಮನ್ನಗಲಿ ೫ ವರ್ಷ. ಅವರ ನೆನಪಿಗಾಗಿ ‘ನನ್ನೊಳಗಿನ ನಾನು’ ಅವರ ಆತ್ಮ ಕಥನದ ಆಯ್ದಭಾಗ.

ವಾರ್ತಾಭಾರತಿವಾರ್ತಾಭಾರತಿ12 July 2023 2:57 PM IST
share
ನನ್ನೊಳಗಿನ ನಾನು :  ಬಿ.ಎ. ಮೊಹಿದೀನ್

ನಾನೂ ನನ್ನ ರಾಜಕೀಯ ಜೀವನದಲ್ಲಿ ಬಹಳಷ್ಟು ಏರುಪೇರುಗಳನ್ನು ಕಂಡವನು, ಶಾಸಕನಾಗಿ, ಮುಖ್ಯ ಸಚೇತಕನಾಗಿ, ಸಚಿವನಾಗಿ, ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೂ ನಾನು ನನ್ನ ತತ್ವ ಸಿದ್ಧಾಂತ, ಆದರ್ಶ, ಸತ್ಯ, ಪ್ರಾಮಾಣಿಕತೆಯನ್ನು ಬಿಟ್ಟವನಲ್ಲ. ಯಾವುದೇ ಅಧಿಕಾರವಿಲ್ಲದೆ ಕೆಲವರಿಂದ ತುಳಿತಕ್ಕೊಳಗಾದಾಗಲೂ, ಮೂಲೆಗುಂಪಾದಾಗಲೂ ಇನ್ನೊಬ್ಬರ ಮುಂದೆ ಯಾವುದೇ ವಿಷಯಕ್ಕೆ ಕೈ ಚಾಚಿದವನಲ್ಲ, ಬೇಡಿ ಕೊಂಡವನಲ್ಲ, ತಲೆ ತಗ್ಗಿಸಿದವನಲ್ಲ. ಖರ್ಚಿಗೆ ದುಡ್ಡಿಲ್ಲದಾಗಲೂ ಅದನ್ನು ಯಾರಿಗೂ ತೋರಿಸಿಕೊಂಡವನಲ್ಲ, ಇನ್ನೊಬ್ಬರ ಜೊತೆ ಹೇಳಿಕೊಂಡವನಲ್ಲ.

ಇಲ್ಲಿ ಒಂದು ವಿಷಯವನ್ನು ನಾನು ಹೇಳಲೇ ಬೇಕು. ನಾನು ಯಾವತ್ತೂ ರಾಜಕಾರಣಿಯಾಗಬೇಕೆಂದು ಕನಸು ಕಂಡವನಲ್ಲ. ನನ್ನ ಕುಟುಂಬದಲ್ಲಿ ಯಾರೂ ರಾಜಕಾರಣಿಗಳಿಲ್ಲ. ನನಗೆ ಇಂಜಿನಿಯರ್ ಆಗಬೇಕೆಂದು ಆಸೆ ಇತ್ತು. ನನ್ನನ್ನು ಓದಿಸಿದ ನನ್ನ ತಂದೆಗೆ ನಾನೊಬ್ಬ ದೊಡ್ಡ ಆಫೀಸರ್ ಆಗಬೇಕೆಂಬ ಕನಸಿತ್ತು. ದೇವರಾಜ ಅರಸು, ರಾಮಕೃಷ್ಣ ಹೆಗಡೆ ಮತ್ತು ಜೆ.ಎಚ್.ಪಟೇಲ್ ಅವರಂತಹ ಮಹಾನ್ ನಾಯಕರು ನನ್ನನ್ನು ಗುರುತಿಸಿ ರಾಜಕೀಯ ಸ್ಥಾನಮಾನ, ಅಧಿಕಾರ ಕೊಡದೆ ಹೋಗಿದ್ದಿದ್ದರೆ ಇಂದು ಈ ಬಿ.ಎ. ಮೊಹಿದ್ದೀನ್ ಯಾರು ಎಂದು ಯಾರಿಗೂ ಗೊತ್ತಿರುತ್ತಿರಲಿಲ್ಲ. ನನ್ನ ಪರಿಚಯವೇ ಯಾರಿಗೂ ಇರುತ್ತಿರಲಿಲ್ಲ. ಒಬ್ಬ ಸಾಮಾನ್ಯನಲ್ಲಿ ಸಾಮಾನ್ಯನಾಗಿ ನಾನು ಮುಗಿದು ಹೋಗುತ್ತಿದ್ದೆ. ನಾನು ರಾಜಕೀಯವನ್ನು ಅರಸಿ ರಾಜಕಾರಣಿಗಳ ಬೆನ್ನು ಹಿಡಿದವನಲ್ಲ. ಅಧಿಕಾರ ಬೇಕು ಎಂದು ಯಾವತ್ತೂ ಹಂಬಲಿಸಿದವನಲ್ಲ. ಬದಲಾಗಿ ರಾಜಕೀಯವೇ ನನ್ನನ್ನು ನನಗೆ ಇಷ್ಟವಿಲ್ಲದಿದ್ದರೂ ಕೈ ಹಿಡಿದು ಎಳೆದುಕೊಂಡು ಹೋಗಿ ಈ ಸ್ಥಾನದಲ್ಲಿ ತಂದು ನಿಲ್ಲಿಸಿದೆ ಎಂಬುದು ಸತ್ಯ.

ನನ್ನ ರಾಜಕೀಯ ಬದುಕಿಗೆ ಆದರ್ಶವಾಗಿದ್ದವರು ಇಸ್ಲಾಮಿನ ನಾಲ್ಕು ಖಲೀಫರುಗಳಾದ ಅಬೂಬಕರ್ ಸಿದ್ದೀಕ್(ರ), ಉಮರ್ ಇಬ್ನು ಖತ್ತಾಬ್(ರ), ಉಸ್ಮಾನ್ (ರ) ಮತ್ತು ಅಲಿ ಇಬ್ನು ಅಬೂ ತಾಲಿಬ್ (ರ). ಇವರ ಚರಿತ್ರೆಯೇ ನನಗೆ ಸ್ಫೂರ್ತಿ, ಇವರಾರು ಸ್ಥಿತಿವಂತರಾಗಿರಲಿಲ್ಲ. ತಮ್ಮದೆಲ್ಲವನ್ನೂ ಸಮಾಜಕ್ಕೆ ಧಾರೆ ಎರೆದ ಮಹಾನ್ ವ್ಯಕ್ತಿಗಳಾಗಿದ್ದರು. ಇವರು ಪ್ರಾಮಾಣಿಕರಾಗಿದ್ದರು. ನ್ಯಾಯ ಪಾಲಿಸುವವರಾಗಿದ್ದರು. ಕೆಡುಕು, ಭ್ರಷ್ಟಾಚಾರಗಳನ್ನು ಕಂಡರೆ ಕಂಡವಾಗುತ್ತಿದ್ದರು, ಅಂತಹವರಿಗೆ ಗರಿಷ್ಠ ಶಿಕ್ಷೆ ವಿಧಿಸುತ್ತಿದ್ದರು. ಉಮರ್ ಇಬ್ನು ಖತ್ತಾಬ್ ಅವರ ಆಡಳಿತ ಕಾಲದಲ್ಲಿ ಒಬ್ಬ ಹಾಲು ಖರೀದಿಸುವವನು ಹಾಲು ಮಾರಾಟಗಾರನಲ್ಲಿ ‘‘ನೀನು ಹಾಲಿಗೆ ನೀರು ಬೆರೆಸದ ತುಂಬಾ ಒಳ್ಳೆಯ ಹಾಲನ್ನು ಕೊಡುತ್ತಿರುವೆ. ಇದಕ್ಕೆ ಕಾರಣವೇನು?’’ ಎಂದು ಕೇಳಿದನಂತೆ. ಆಗ ಹಾಲು ಮಾರುವವನು ಹೆದರಿ ‘‘ಅಯ್ಯೋ, ಹಾಗೇನಾದರೂ ನಾನು ಹಾಲಿಗೆ ನೀರು ಬೆರೆಸಿದರೆ, ಅದು ಖಲೀಫರಿಗೆ ಗೊತ್ತಾಗಿ ಬಿಟ್ಟರೆ ನನ್ನ ಕತೆ ಮುಗಿದಂತೆಯೇ. ಹಾಲಿಗೆ ನೀರು ಬೆರೆಸುವುದು ಬಿಡಿ; ಅಂತಹ ಯೋಚನೆ ಮಾಡುವುದು ಕೂಡಾ ಈ ನಾಡಿನಲ್ಲಿ ಯಾರಿಗೂ ಸಾಧ್ಯವಿಲ್ಲ’’ ಎಂದನಂತೆ,

ಖಲೀಫಾ ಅವರುಗಳು ಸಾರ್ವಜನಿಕ ಹಣದಿಂದ ಸ್ವಂತಕ್ಕೆ ಎಂದು ಒಂದು ಪೈಸೆ ಕೂಡಾ ಉಪಯೋಗಿಸಿದವರಲ್ಲ. ಭ್ರಷ್ಟಾಚಾರ ಎಂಬ ಶಬ್ದವೇ ಅವರ ಆಡಳಿತದಲ್ಲಿ, ಬದುಕಲ್ಲಿ ಇರಲಿಲ್ಲ. ಅವರೆಲ್ಲ ಸರಳವಾದ ಆದರ್ಶ ಬದುಕನ್ನು ಬದುಕಿದವರು. ಯಾವೊಬ್ಬ ಪ್ರಜೆಗೂ ಅನ್ಯಾಯವಾಗದಂತೆ ನೋಡಿಕೊಂಡವರು. ಅವರೆಲ್ಲ ಮರಣ ಹೊಂದುವಾಗ ಅವರಲ್ಲಿ ಉಳಿತಾಯದ ಹಣ, ಆಸ್ತಿ ಎಂದು ಏನೂ ಇರಲಿಲ್ಲ.

ದುರಂತ ಎಂದರೆ ಈ ನಾಲ್ವರು ಖಲೀಫಾಗಳು ಆಡಳಿತ ನಡೆಸಿದ ಅರೇಬಿಯದಲ್ಲೂ ಇಂದು ಭ್ರಷ್ಟಾಚಾರ ತಾಂಡವ ವಾಡುತ್ತಿದೆ. ಜಗತ್ತಿಗೆ ಆದರ್ಶ, ಮಾದರಿಯಾಗಬೇಕಾಗಿದ್ದ ಅರಬ್ ರಾಷ್ಟ್ರಗಳು ಇಂದು ಪತನದತ್ತ ಸಾಗುತ್ತಿವೆ. ಮಕ್ಕಳು, ಮಹಿಳೆಯರು, ಅಮಾಯಕರ ಮೇಲೆ ಬಾಂಬುಗಳ ಸುರಿಮಳೆಯಾಗುತ್ತಿವೆ. ಒಂದು ರಾಷ್ಟ್ರವನ್ನು ಮುಗಿಸಲು ಇನ್ನೊಂದು ಅರಬ್ ರಾಷ್ಟ್ರ ಟೊಂಕಕಟ್ಟಿ ನಿಂತಿದೆ. ಪ್ರವಾದಿಗಳು ನಡೆದಾಡಿದ ನೆಲದಲ್ಲಿ ರಕ್ತದೋಕುಳಿ ಹರಿಯುತ್ತಿದೆ. ಈ ನಾಲ್ವರು ಖಲೀಫಾಗಳ ಮರಣಾನಂತರ ಈ ಜಗತ್ತಿನಲ್ಲಿ ಎಲ್ಲೂ ಅವರು ನಡೆಸಿದಂತಹ ಆಡಳಿತ ನೆಲೆ ನಿಲ್ಲಲೇ ಇಲ್ಲ.

ವಂಶಾಡಳಿತ ಇಸ್ಲಾಮಿಗೆ ಸಂಪೂರ್ಣ ವಿರುದ್ಧವಾದುದಾಗಿದೆ. ಅಂತಹ ಒಂದು ಕಲ್ಪನೆ ಕೂಡಾ ಇಸ್ಲಾಮಿನಲ್ಲಿಲ್ಲ. ವಂಶಾಡಳಿತದ ವಿರುದ್ಧ ಅಂದು ಕರ್ಬಲಾ ಯುದ್ಧವೇ ನಡೆದಿತ್ತು. ಆದರೆ ಇಂದು ಅರೇಬಿಯದಲ್ಲಿ ಇಸ್ಲಾಮಿಗೆ ವಿರುದ್ಧವಾದಂತಹ ವಂಶಾಡಳಿತವಿದೆ. ಅರಬ್ ಜಗತ್ತಿನ ಅರಾಜಕತೆಗೆ ಇದೂ ಒಂದು ಕಾರಣವಾಗಿದೆ. ‘ಪ್ರಜಾಪ್ರಭುತ್ವ’ ದೇಶವಾದ ಭಾರತದಲ್ಲೂ ಇಂದು ನಾನು, ನನ್ನ ಮಗ, ನನ್ನ ಅಳಿಯ, ನನ್ನ ಮಗಳು, ನನ್ನ ಮೊಮ್ಮಗ ಹೀಗೆ ಎಲ್ಲರೂ ಅಧಿಕಾರಕ್ಕೆ ಬರಬೇಕು ಎಂಬ ಪ್ರಜಾತಂತ್ರಕ್ಕೆ ವಿರೋಧವಾದಂತಹ ಅನೀತಿ ಜಾರಿಗೆ ಬರುತ್ತಿದೆ. ಇದು ‘ಪ್ರಜಾಪ್ರಭುತ್ವ’ದ ಒಂದು ದೊಡ್ಡ ದುರಂತವಾಗಿದೆ.

ಇನ್ನು ನನ್ನ ಬಗ್ಗೆ ಹೇಳುವುದಾದರೆ, ಕೆಲವರು ನಾನು ತುಂಬಾ ಒರಟ, ನನಗೆ ಕೋಪ ಜಾಸ್ತಿ ಎಂದು ಹಿಂದಿನಿಂದ ಆಡಿಕೊಳ್ಳುತ್ತಿ ದ್ದಾರೆ ಎಂದು ಕೇಳಿದ್ದೇನೆ. ಇಂತಹ ಮಾತನ್ನು ನನ್ನ ಆತ್ಮೀಯ ಗೆಳೆಯ ಡಾ. ಟಿ.ಕೆ. ಮುಹಮ್ಮದ್ ಕೂಡಾ ನನ್ನೊಂದಿಗೆ ಒಮ್ಮೆ ಹೇಳಿದ್ದ. ಈ ಬಗ್ಗೆ ನನ್ನೊಡನೆ ಜಗಳವೂ ಆಡಿದ್ದ.

ಒಮ್ಮೆ ಏನಾಯಿತು ಎಂದರೆ, ಈ ಡಾ. ಟಿ.ಕೆ. ಅವನ ಯಾವುದೋ ಒಂದು ಕೆಲಸ ಆಗಬೇಕು ಎಂದು ನಾನು ಬೆಂಗಳೂರಿನಲ್ಲಿದ್ದಾಗ ಫೋನ್ ಮಾಡಿದ್ದ. ನಾನಾಗ ಸಚಿವನಾಗಿದ್ದೆ. ನಾನು ಅವನನ್ನು ಬೆಂಗಳೂರಿಗೆ ಬರಲು ಹೇಳಿದ್ದೆ. ಆತ ನನ್ನ ಬೆಂಗಳೂರಿನ ಕಚೇರಿಗೆ ಬಂದವನು ಚೇಂಬರ್ನೊಳಗಿದ್ದ ನನಗೆ ಕಾಣುವಂತೆ ಹೊರಗೆ ಕುರ್ಚಿಯಲ್ಲಿ ಕುಳಿತಿದ್ದ. ನಾನು ಅವನನ್ನು ಗಮನಿಸಿದ್ದೆ. ಕಚೇರಿ ತುಂಬಾ ಜನ ಇದ್ದರು. ಊರಿಂದ ಬಂದಿದ್ದಾನೆ. ಎಲ್ಲರೂ ಹೋದ ಮೇಲೆ ಇವನಲ್ಲಿ ಆರಾಮವಾಗಿ ಕುಳಿತು ಮಾತನಾಡುವ ಎಂದು ಸುಮ್ಮನಿದ್ದೆ. ಸ್ವಲ್ಪಹೊತ್ತು ಕಳೆದ ಮೇಲೆ ನೋಡುತ್ತೇನೆ, ಈ ಡಾ. ಟಿ.ಕೆ. ನಾಪತ್ತೆಯಾಗಿದ್ದ. ಇವನಿಗೆ ಬೇಸರವಾಗಿರಬಹುದು ಎಂದು ನನಗೆ ಗೊತ್ತಾಯಿತು. ಮತ್ತೆ ಅವನನ್ನು ಹುಡುಕಿಸಿ ಕರೆಸಿದ್ದೆ. ಆತ ಕೋಪದಿಂದ ಕೆಂಡವಾಗಿದ್ದ. ‘‘ನೀನೀಗ ದೊಡ್ಡ ಜನ ಅಲ್ವಾ, ನಾನು ಬಂದು ನಿನ್ನ ಎದುರು ಕುಳಿತಿದ್ದೇನೆ, ನೀನು ನೋಡಿಯೂ ನೋಡದ ಹಾಗೆ ಮಾಡಿದಿಯಲ್ಲ, ಈ ರೀತಿ ಅವಮಾನ ಮಾಡಬಾರದು’’ ಎಂದು ಏನೇನೋ ಹೇಳತೊಡಗಿದ. ನಿಜವಾಗಲೂ ನನಗೆ ಅಂತಹ ಭಾವನೆಯೇ ಇರಲಿಲ್ಲ. ಕೆಲಸದ ಒತ್ತಡದಿಂದ ನಾನೇನಾದರೂ ಆ ರೀತಿ ವರ್ತಿಸಿರಬಹುದು. ಆದರೆ ಅದು ಉದ್ದೇಶಪೂರ್ವಕವಲ್ಲ. ಇದೆಲ್ಲ ಅವನಿಗೆ ವಿವರಿಸಿದ ಮೇಲೆ ಆತ ತಣ್ಣಗಾದ. ಆನಂತರ ಅವನ ಕೆಲಸ ಮಾಡಿಸಿಕೊಟ್ಟು ಕಳುಹಿಸಿದ್ದೆ.

ಇನ್ನು ಕೆಲವು ಸಂದರ್ಭಗಳಲ್ಲಿ ನಾನು ನಿಜವಾಗಲೂ ಒರಟನಾಗಿರುತ್ತಿದ್ದೆ. ಕಳ್ಳತನ ಮಾಡಿ, ಗಲಾಟೆ-ಗಲಭೆ ಎಬ್ಬಿಸಿ, ಕೋಮು ಗಲಭೆಯಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ತೊಂದರೆ ಮಾಡಿದಾಗ ಪೊಲೀಸರು ಬಂಧಿಸಿದರೆ ಅಂತಹವರ ಹೆತ್ತವರು ‘‘ನನ್ನ ಮಗನನ್ನು ಪೊಲೀಸರು ಸುಮ್ಮನೆ ಬಂಧಿಸಿದ್ದಾರೆ. ನೀವು ಪೊಲೀಸರಿಗೆ ಒಂದು ಫೋನ್ ಮಾಡಬೇಕು. ನನ್ನ ಮಗನನ್ನು ಬಿಡಿಸಿಕೊಡಬೇಕು. ಆತ ಯಾವ ತಪ್ಪೂ ಮಾಡಿಲ್ಲ. ಅಮಾಯಕ. ಆತನನ್ನು ಸುಮ್ಮನೆ ಈ ಹಗರಣದಲ್ಲಿ ಸಿಲುಕಿಸಲಾಗಿದೆ’’ ಎಂದು ನನಗೆ ಫೋನ್ ಮಾಡಿಯೋ, ಊರಲ್ಲಿದ್ದರೆ ಮನೆಗೆ ಬಂದು ಗೋಗರೆಯುತ್ತಿದ್ದರು. ಆಗ ನಾನು ಒರಟನಾಗುತ್ತಿದ್ದೆ.

ಯಾವುದೇ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದರೆ ಯಾರು ಹೇಳಿದರೂ, ಎಷ್ಟೇ ದೊಡ್ಡ ವ್ಯಕ್ತಿ ಶಿಫಾರಸು ಮಾಡಿದರೂ ನಾನು ಅವರನ್ನು ಬಿಡಿಸಲು ಠಾಣೆಗೆ ಫೋನ್ ಮಾಡುತ್ತಿರಲಿಲ್ಲ. ಅದೇ ರೀತಿ ಯಾರನ್ನಾದರೂ ಬಂಧಿಸಲು ಒತ್ತಡ ಹೇರುತ್ತಿರಲಿಲ್ಲ. ಪೊಲೀಸರ ಕರ್ತವ್ಯಕ್ಕೆ ಯಾವತ್ತೂ ಅಡ್ಡಿಪಡಿಸುತ್ತಿರಲಿಲ್ಲ. ಅವರ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಹೀಗೆ ಪೊಲೀಸರ ಮೇಲೆ ಒತ್ತಡ ಹೇರಿದರೆ ಆರೋಪಿಗಳನ್ನು ಬಿಡುವ, ಅಮಾಯಕರನ್ನು ಬಂಧಿಸುವ ಸಾಧ್ಯತೆಗಳಿರುತ್ತವೆ. ಇಂತಹ ಹಸ್ತಕ್ಷೇಪಗಳು ಸ್ವಸ್ಥ ಸಮಾಜಕ್ಕೆ ಮಾರಕ. ಇದು ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತದೆ ಎಂಬುದು ನನ್ನ ನಿಲುವು, ಆದ್ದರಿಂದ ಇಂತಹ ಸಂದರ್ಭಗಳಲ್ಲಿ ನಾನು ಬಹಳ ಒರಟನಾಗಿ ಬಿಡುತ್ತಿದ್ದೆ. ಇದು ಹಲವಾರು ಜನರಿಗೆ ನನ್ನ ಮೇಲೆ ಅಸಹನೆ, ಅಸಮಾಧಾನ ಮೂಡಲು ಕಾರಣವಾಗಿತ್ತು. ಇಂತಹವರು ನನ್ನನ್ನು ಒರಟ, ಯಾವುದೇ ಕೆಲಸ ಮಾಡದವನು, ಮುಂಗೋಪಿ ಎಂದೆಲ್ಲ ಹೇಳಿಕೊಂಡು ತಿರುಗುತ್ತಿದ್ದರು. ಇದರಲ್ಲಿ ನನಗೆ ಎಳ್ಳಷ್ಟೂ ಬೇಸರವಾಗುತ್ತಿಲ್ಲ. ಇನ್ನು ನನ್ನ ಮಕ್ಕಳ ಬಗ್ಗೆ ಹೇಳುವುದಾದರೆ, ಅವರ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಅಧಿಕಾರದ ತುತ್ತತುದಿಯಲ್ಲಿದ್ದಾಗಲೂ ಕೂಡಾ ಅವರು ಯಾವತ್ತೂ ನನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡವರಲ್ಲ, ಹಸ್ತಕ್ಷೇಪ ಮಾಡಿದವರಲ್ಲ. ವಿಧಾನಸೌಧದ ಮೆಟ್ಟಿಲು ಕೂಡಾ ಏರಿದವರಲ್ಲ, ಇಂದಿನ ರಾಜಕೀಯದಲ್ಲಿ ನಡೆಯುತ್ತಿರುವ ಸ್ವಜನ ಪಕ್ಷಪಾತ, ಕುಟುಂಬ ವ್ಯಾಮೋಹ ನೋಡಿದರೆ ನನಗೆ ಒಂದು ರೀತಿಯ ಜಿಗುಪ್ಪೆ ಉಂಟಾಗುತ್ತದೆ. ಈ ರಾಜಕೀಯದ ಕೊಳಚೆಗೆ ನನ್ನ ಮಕ್ಕಳು, ಕುಟುಂಬ ಬಲಿಯಾಗದೇ ಇರುವುದು ನನಗೆ ಬಹಳ ಸಮಾಧಾನ ತಂದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X