ಜಮ್ಮು ಕಾಶ್ಮೀರ: ಕಾಂಗ್ರೆಸ್ ನಾಯಕನ ಮನೆಯ ಮೇಲೆ ಉಗ್ರರಿಂದ ದಾಳಿ
ಬಂಡಿಪೊರ್, ನ.26: ಜಮ್ಮು ಮತ್ತು ಕಾಶ್ಮೀರದ ಹಜಿನ್ ಪ್ರಾಂತ್ಯದಲ್ಲಿರುವ ಬಂಡಿಪೊರ್ ಎಂಬಲ್ಲಿ ಕಾಂಗ್ರೆಸ್ ಮುಖಂಡನ ಮನೆಯ ಮೇಲೆ ಉಗ್ರರು ದಾಳಿ ನಡೆಸಿದ ಘಟನೆ ರವಿವಾರ ನಡೆದಿದೆ.
ಹುತಾತ್ಮರಾದ ಬಂಡುಕೋರ ನಿಗ್ರಹದಳದ ಕಮಾಂಡರ್ ಕುಕ ಪರ್ರೆಯವರ ಮಗ ಮತ್ತು ಕಾಂಗ್ರೆಸ್ ಮುಖಂಡ ಇಮ್ತಿಯಾಝ್ ಪರ್ರೆಯ ಮನೆಯ ಮೇಲೆ ಯದ್ವಾತದ್ವಾ ಗುಂಡಿನ ದಾಳಿ ನಡೆಸಿದ ಉಗ್ರರು ಗ್ರೆನೇಡ್ಗಳನ್ನೂ ಎಸೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ಘಟನಾಸ್ಥಳದಲ್ಲಿ ನಿಯೋಜನೆಗೊಂಡಿದ್ದ ಸಿಆರ್ಪಿಎಫ್ ತಂಡ ಪ್ರತಿದಾಳಿ ನಡೆಸಿ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಸಫಲವಾಗಿದೆ. ಘಟನೆಯಲ್ಲಿ ಸಾವುನೋವು ಸಂಭವಿಸಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story