ಸಿಬಿಎಸ್ಇ: ಪ್ರತ್ಯೇಕತಾವಾದಿ ನಾಯಕನ ಪುತ್ರಿಗೆ ಅಗ್ರಶ್ರೇಣಿ
ಶ್ರೀನಗರ, ಮೇ 26: ಸಿಬಿಎಸ್ಇಯ 12ನೇ ತರಗತಿ ಪರೀಕ್ಷೆಯಲ್ಲಿ ಪತ್ಯೇಕತಾವಾದಿ ನಾಯಕ ಶಬೀರ್ ಶಾಹ್ ಅವರ ಪುತ್ರಿ ಶಮಾ ಶಬೀರ್ ಶಾಹ್ ಜಮ್ಮು ಹಾಗೂ ಕಾಶ್ಮೀರದ ಟಾಪರ್ ಆಗಿ ಮೂಡಿ ಬಂದಿದ್ದಾರೆ.
ಇಲ್ಲಿನ ಅಥ್ವಾಜನದ ದಿಲ್ಲಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯಾಗಿರುವ ಶಮಾ ಶಬೀರ್ ಶಾಹ್ ಶೇ. 97.8 ಅಂಕಗಳನ್ನು ಪಡೆದಿದ್ದಾರೆ ಎಂದು ಶಾಲೆಯ ಆಡಳಿತಾಧಿಕಾರಿ ತಿಳಿಸಿದ್ದಾರೆ.
ಶಮಾ ಶಬೀರ್ ಶಾಹ್ ಜಮ್ಮು ಕಾಶ್ಮೀರ ಪ್ರಜಾಸತ್ತಾತ್ಮಕ ಸ್ವತಂತ್ರ ಪಕ್ಷ (ಜೆಕೆಡಿಎಫ್ಪಿ)ನ ವರಿಷ್ಠ ಶಬೀರ್ ಶಾಹ್ ಅವರ ಪುತ್ರಿ. ಶಬೀರ್ ಶಾ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ. ರಾಜ್ಯದಲ್ಲೇ ಟಾಪರ್ ಆಗಿ ಮೂಡಿ ಬಂದಿರುವುದಕ್ಕೆ ಶಮಾ ಶಬೀರ್ ಶಾಹ್ಗೆ ಅಭಿನಂದನೆ ಸಲ್ಲಿಸಿರುವ ಜಮ್ಮು ಹಾಗೂ ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ‘‘ಶಮಾ ನಿಜವಾಗಿಯೂ ನಮ್ಮ ರಾಜ್ಯದ ಯುವಜನಾಂಗಕ್ಕೆ ಸ್ಪೂರ್ತಿ’’ ಎಂದಿದ್ದಾರೆ.
Next Story