ಉತ್ತರ ಪ್ರದೇಶ: ನೂರ್ ಪುರ್ ನಲ್ಲಿ ಎಸ್ಪಿ ಅಭ್ಯರ್ಥಿ ನೈಮುಲ್ ಹಸನ್ ಗೆ ಗೆಲುವು
ಬಿಜೆಪಿಗೆ ಮುಖಭಂಗ
ಉತ್ತರ ಪ್ರದೇಶ, ಮೇ 31: ಇಲ್ಲಿನ ನೂರ್ ಪುರ್ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಜಯ ಗಳಿಸಿದೆ. ಎಸ್ಪಿ ಅಭ್ಯರ್ಥಿ ನೈಮುಲ್ ಹಸನ್ 6211 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಈ ಸೋಲಿನಿಂದ ಬಿಜೆಪಿಗೆ ಮುಖಭಂಗವಾಗಿದೆ.
ಇಲ್ಲಿನ ಬಿಜೆಪಿ ಶಾಸಕರಾಗಿದ್ದ ಲೋಕೇಂದ್ರ ಸಿಂಗ್ ಕಾರು ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆದಿತ್ತು. ಬಿಜೆಪಿಯಿಂದ ಲೋಕೇಂದ್ರ ಸಿಂಗ್ ರ ಪತ್ನಿ ಅವಾನಿ ಸಿಂಗ್ ಸ್ಪರ್ಧಿಸಿದ್ದರು.
Next Story