11ನೇ ಬಾರಿ ಫ್ರೆಂಚ್ ಓಪನ್ ಜಯಿಸಿದ ನಡಾಲ್
ಪ್ಯಾರಿಸ್, ಜೂ.10: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ನಲ್ಲಿ ರವಿವಾರ ಸ್ಪೇನ್ನ ರಫೆಲ್ ನಡಾಲ್ ಅವರು ಪ್ರಶಸ್ತಿ ಗೆಲ್ಲುವು ಮೂಲಕ 11ನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ,
ಇಂದು ನಡೆದ ಫೈನಲ್ನಲ್ಲಿ ನಡಾಲ್ ಅವರು ಆಸ್ತ್ರೀಯದ ಡೊಮಿನಿಕ್ ಥೀಮ್ ಅವರನ್ನು 6-3, 6-4, 6-2 ಅಂತರದಿಂದ ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಇದರೊಂದಿಗೆ ನಡಾಲ್ ಅವರು 11 ಆಸ್ತ್ರೇಲಿಯನ್ ಓಪನ್ ಜಯಿಸಿರುವ ಮಾರ್ಗರೇಟ್ ಕೋರ್ಟ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ನಡಾಲ್ ತಾನು ಗೆದ್ದಿರುವ ಗ್ರ್ಯಾನ್ ಸ್ಲಾಮ್ ದಾಖಲೆಯನ್ನು 17ಕ್ಕೆ ಏರಿಸಿದ್ದಾರೆ.
Next Story