‘ಸೇಕ್ರೆಡ್ ಗೇಮ್ಸ್’ ವಿವಾದ : ನವಾಝುದ್ದೀನ್ ಸಿದ್ದೀಕಿ ವಿರುದ್ಧ ದೂರು ನೀಡಿದ ಕಾಂಗ್ರೆಸ್ ನಾಯಕ
ಕೋಲ್ಕತ್ತಾ, ಜು. 11: ವೆಬ್ ಸರಣಿ ‘ಸೇಕ್ರೆಡ್ ಗೇಮ್ಸ್’ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಪಶ್ಚಿಮಬಂಗಾಳದ ಕಾಂಗ್ರೆಸ್ ನಾಯಕರೊಬ್ಬರು ನಟ ನವಾಝುದ್ದೀನ್ ಸಿದ್ದೀಕಿ, ನೆಟ್ಫ್ಲಿಕ್ಸ್ ಹಾಗೂ ವೆಬ್ ಸರಣಿಯ ನಿರ್ಮಾಪಕರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ಪಕ್ಷದ ನಾಯಕ ರಾಜೀವ್ ಕುಮಾರ್ ಸಿನ್ಹಾ ಗಿರೀಶ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ‘‘ದೂರನ್ನು ಉನ್ನತ ಅಧಿಕಾರಿಗಳಿಗೆ ರವಾನಿಸಲಾಗುವುದು ಹಾಗೂ ಮುಂದಿನ ಮೂರು ದಿನಗಳ ಒಳಗೆ ಪ್ರಥಮ ಮಾಹಿತಿ ವರದಿ ಸಂಖ್ಯೆಯನ್ನು ಕಳುಹಿಸಿಕೊಡಲಾಗುವುದು ಎಂದು ಪೊಲೀಸ್ ಠಾಣೆಯಲ್ಲಿದ್ದ ಅಧಿಕಾರಿಗಳು ತಿಳಿಸಿದ್ದಾರೆ’’ ಎಂದು ಸಿನ್ಹಾ ಹೇಳಿದ್ದಾರೆ.
ವೆಬ್ ಸರಣಿಯಲ್ಲಿ ಸಿದ್ದೀಖಿ ಅವರು ರಾಜೀವ್ ಗಾಂಧಿ ಅವರನ್ನು ನಿಂದನೀಯ ಪದ ಬಳಸಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಆ ಕಾಲದ ಕೆಲವು ಸತ್ಯಗಳನ್ನು ತಪ್ಪು ವ್ಯಾಖ್ಯಾನಿಸಿದ್ದಾರೆ ಎಂದು ಸಿನ್ಹಾ ತಿಳಿಸಿದ್ದಾರೆ.
Next Story