ಗಾಝಿಯಾಬಾದ್ : ಮಸೀದಿಯ ಛಾವಣಿಯಲ್ಲಿ ಬಾಲಕಿಯ ಮೃತದೇಹ ಪತ್ತೆ
ಗಾಝಿಯಾಬಾದ್ , ಅ. 8: ಶನಿವಾರ ಅಪರಾಹ್ನ ತನ್ನ ಮನೆಯಿಂದ ನಾಪತ್ತೆಯಾಗಿದ್ದ ಏಳು ವರ್ಷದ ಬಾಲಕಿಯೊಬ್ಬಳ ಮೃತದೇಹ ಮುರಾದ್ನಗರ ದಲ್ಲಿರುವ ಮಸೀದಿಯ ಛಾವಣಿಯಲ್ಲಿ ಗೋಣಿ ಚೀಲದಲ್ಲಿ ತುರುಕಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ರವಿವಾರ ಬೆಳಗ್ಗೆ 6.30ರ ಹೊತ್ತಿಗೆ ಮಸೀದಿಗೆ ಪ್ರಾರ್ಥನೆಗೆಂದು ತೆರಳಿದ್ದ ಸ್ಥಳೀಯ ವ್ಯಕ್ತಿ ಸುಲೈಮಾನ್, ಗೋಣಿಚೀಲದೊಳಗೆ ಬಾಲಕಿಯ ಮೃತದೇಹ ನೋಡಿ ಕೂಡಲೇ ಆಕೆಯ ಕುಟುಂಬ ಹಾಗೂ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಬಾಲಕಿಯನ್ನು ಕತ್ತು ಹಿಚುಕಿ ಸಾಯಿಸಲಾಗಿತ್ತೆಂದು ಹೇಳಲಾಗಿದೆ. ತನ್ನ ಪುತ್ರಿಯನ್ನು ಸ್ಥಳೀಯ ಕೌನ್ಸಿಲರ್ ಅಜಾಝ್ ಬೇಗ್ ಸಾಯಿಸಿದ್ದಾರೆಂದು ಬಾಲಕಿಯ ತಂದೆ ಆರೋಪಿಸಿದ್ದಾರೆ. ಬಾಲಕಿಯ ಮಾವ ಸ್ಥಳೀಯಾಡಳಿತ ಚುನಾವಣೆಯಲ್ಲಿ ಬೇಗ್ ವಿರುದ್ಧ ಸ್ಪರ್ಧಿಸಿದ್ದರಿಂದ ಆತನಿಗೆ ಬಾಲಕಿಯ ಕುಟುಂಬದ ವಿರುದ್ಧ ದ್ವೇಷವಿತ್ತೆಂದು ಪೊಲೀಸರು ಹೇಳಿದ್ದಾರೆ.
ಬೇಗ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
Next Story