ಜಮ್ಮು-ಕಾಶ್ಮೀರದಲ್ಲಿ 2018ರಲ್ಲಿ 223 ಭಯೋತ್ಪಾದಕರ ಹತ್ಯೆ
ಎಂಟು ವರ್ಷಗಳಲ್ಲಿ ಕಣಿವೆ ರಾಜ್ಯದಲ್ಲಿ ಗರಿಷ್ಠ ಸಾವು
ಶ್ರೀನಗರ, ಡಿ.9: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ 2018ರಲ್ಲಿ ಗಲಭೆ ಜಾಸ್ತಿಯಾಗಿತ್ತು. ಈ ವರ್ಷ 223 ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಇದೇ ವೇಳೆ 73 ನಾಗರಿಕರು ಮತ್ತು ಭದ್ರತಾ ಪಡೆಗಳ 77 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
2018ರಲ್ಲಿ ವಿದೇಶಿ ಮೂಲದ 93 ಮಂದಿ ಬಲಿಯಾಗಿದ್ದಾರೆ. ಆದರೆ 2017ರಲ್ಲಿ ಕೊಲ್ಲಲ್ಪಟ್ಟ ವಿದೇಶಿಯರ ದಾಖಲೆ ಸಿಕ್ಕಿಲ್ಲ. ಪಾಕಿಸ್ತಾನ ಮೂಲದ ಭಯೋತ್ಪಾದಕರು ಕಾಶ್ಮೀರದ ಸ್ಥಳೀಯರನ್ನು ಬಳಸಿಕೊಂಡು ಭಯೋತ್ಪಾದಕ ಚಟುವಟಿಕೆಗಳಲ್ಲಿ ನಿರತರಾಗಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಜಾಸ್ತಿಯಾಗಿರುವುದು ಬೆಳಕಿಗೆ ಬಂದಿದೆ.
2018 ಜೂನ್ 25 ರಿಂದ ಸೆಪ್ಟೆಂಬರ್ 14ರ ವರೆಗೆ 51 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಸೆಪ್ಟೆಂಬರ್ 15ರಿಂದ ಡಿಸೆಂಬರ್ 5 ರ ತನಕ 85 ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಸೆ.25ರಿಂದ ಡಿ.5ರ ತನಕ ರಾಜ್ಯದಲ್ಲಿ ಕಲ್ಲು ತೂರಾಟ ಪ್ರಕರಣಗಳಲ್ಲಿ 2 ನಾಗರಿಕರು ಸಾವಿಗೀಡಾಗಿದ್ದಾರೆ ಮತ್ತು 170 ಮಂದಿ ಗಾಯಗೊಂಡಿದ್ಧಾರೆ.
ಕಾಶ್ಮೀರದಲ್ಲಿ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡವರ ವಿವರ
2017 2018
ಕೊಲ್ಲಲ್ಪಟ್ಟ ಭಯೋತ್ಪಾದಕರು 213 223
ವಿದೇಶಿ ಮೂಲದ ಭಯೋತ್ಪಾದಕರು -- 093
ನಾಗರಿಕರ ಸಾವು 040 077
ಭದ್ರತಾ ಸಿಬ್ಬಂದಿಗಳ ಸಾವು 080 080
ಭಯೋತ್ಪಾದಕ ಘಟನೆಗಳು 342 429