2019ರ ಲೋಕಸಭೆ ಚುನಾವಣೆ: ತಮಿಳುನಾಡಿನಲ್ಲಿ ಎಐಎಡಿಎಂಕೆ – ಬಿಜೆಪಿ ಮೈತ್ರಿ
ಚೆನ್ನೈ, ಫೆ. 19: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿಯನ್ನು ಪಿಎಂಕೆ ಬೆಂಬಲಿಸಲಿದೆ ಎಂದು ತಮಿಳುನಾಡಿನ ಉಪ ಮುಖ್ಯಮಂತ್ರಿ ಒ. ಪನ್ನೀರ್ಸೆಲ್ವಂ ಮಂಗಳವಾರ ಘೋಷಿಸಿದ್ದಾರೆ.
6 ಲೋಕಸಭಾ ಸ್ಥಾನಗಳಲ್ಲಿ ಪಿಎಂಕೆ ಸ್ಪರ್ಧಿಸಲಿದೆ ಹಾಗೂ ಒಂದು ರಾಜ್ಯ ಸಭಾ ಸ್ಥಾನವನ್ನು ಬಿಟ್ಟು ಕೊಡಲಿದೆ. ಪಿಎಂಕೆ ಹೆಚ್ಚಿನ ಬೆಂಬಲ ಇರುವುದು ಉತ್ತರ ತಮಿಳುನಾಡಿನಲ್ಲಿ. ಮುಖ್ಯವಾಗಿ ಒಬಿಸಿ ವಣ್ಣಿಯಾರ್ ಸಮುದಾಯ ಇರುವ ಈ ಪ್ರದೇಶದಲ್ಲಿ.
ಪಿಎಂಕೆ ಇಂದು ನಮ್ಮ ಮೈತ್ರಿಯಲ್ಲಿ ಸೇರಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪಿಎಂಕೆಗೆ 7 ಸ್ಥಾನಗಳನ್ನು ನೀಡಲಾಗುವುದು ಎಂದು ಇಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಹೇಳಿದರು.
ಉಪ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ ಪನ್ನೀರ್ ಸೆಲ್ವಂ, ‘‘ಉಪ ಚುನಾವಣೆಯಲ್ಲಿ ನಾವು 21 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದೇವೆ. ನಮಗೆ ಪಿಎಂಕೆ ಬೆಂಬಲ ನೀಡಲಿದೆ’’ ಎಂದರು.
Next Story