"ಸಪ್ನಾ ಚೌಧರಿ ಸೋನಿಯಾರಂತೆ ನರ್ತಕಿ, ರಾಹುಲ್ ಆಕೆಯನ್ನು ಮದುವೆಯಾಗಲಿ"
ಬಿಜೆಪಿ ಶಾಸಕನ ಕೀಳುಮಟ್ಟದ ಹೇಳಿಕೆ
ಹೊಸದಿಲ್ಲಿ, ಮಾ.24: ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿರುವ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಈ ಬಾರಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಸಪ್ನಾ ಚೌಧರಿಯವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ.
ನರ್ತಕಿಯಾಗಿರುವ ಸಪ್ನಾ ಚೌಧರಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸುವ ಮೂಲಕ ರಾಹುಲ್ ಗಾಂಧಿ ತಮ್ಮ ತಂದೆಯನ್ನು ಅನುಸರಿಸಿದ್ದಾರೆ. ಇಟಲಿಯಲ್ಲಿ ಸೋನಿಯಾ ಗಾಂಧಿ ನರ್ತಕಿಯಾಗಿದ್ದರು ಎಂದು ಹೇಳಿದ್ದಾರೆ.
“ರಾಹುಲ್ ರ ತಾಯಿ ಕೂಡ ಇಟಲಿಯಲ್ಲಿ ನರ್ತಕಿಯಾಗಿದ್ದರು. ರಾಹುಲ್ ರ ತಂದೆ ಸೋನಿಯಾರನ್ನು ಕರೆತಂದಂತೆ ಈಗ ಅವರು ಸಪ್ನಾರನ್ನು ಕರೆದಂತಿದ್ದಾರೆ ಹಾಗು ಮದುವೆಯಾಗಲಿದ್ದಾರೆ” ಎಂದು ಸುರೇಂದ್ರ ಸಿಂಗ್ ಹೇಳಿದ್ದಾರೆ.
Next Story